add_circle Create Playlist
Kelirondu Katheya - Raaga.com - A World of Music

Kelirondu Katheya

105

Episodes

105 Episodes Play All Episdoes
Ep114 - [ ವ್ಯಕ್ತಿ ಪರಿಚಯ ] - ಅನಂತ್ ಪೈ
ಕೇಳಿರೊಂದು ಕಥೆಯ
access_time13 days ago
" ವ್ಯಕ್ತಿ ಪರಿಚಯ " ಸರಣಿಯಲ್ಲಿ ಮುಂದುವರೆಯುತ್ತಾ ಈ ಸಲ ಕನ್ನಡಿಗ ಅನಂತ್ ಪೈ ಅವರ ಬಗ್ಗೆ ತಿಳಿದುಕೊಳ್ತಿದ್ದೇವೆ . ಭಾರತೀಯ ಸಾಹಿತ್ಯದಲ್ಲಿ ಮಕ್ಕಳ ಸಾಹಿತ್ಯಕ್ಕೆ ಸ್ವಲ್ಪ ಕೊರತೆಯೇ . ಅದರಲ್ಲೂ ಪುರಾಣ ಕತೆಗಳನ್ನು ಬಿಟ್ಟರೆ , ಆಧುನಿಕ ಸಾಹಿತ್ಯದಲ್ಲಿ Easy Reading ಆಗಿರುವ  ಮಕ್ಕಳ ಸಾಹಿತ್ಯ ಅತಿ ಕಡಿಮೆ ಅಂತಲೇ ಹೇಳಬೇಕು .  ಈ ಕೊರತೆ ಮನಗಂಡ ಪೈ  ಅವರ ಕೊಡುಗೆ ಭಾರತೀಯ ಮಕ್ಕಳ ಸಾಹಿತ್ಯಕ್ಕೆ ವಿನೂತನ .    
Ep113 - [ ವ್ಯಕ್ತಿ ಪರಿಚಯ ] - ಲುಡ್ವಿಗ್ ವ್ಯಾನ್ ಬೀಥೋವನ್
ಕೇಳಿರೊಂದು ಕಥೆಯ
access_time20 days ago
ಲುಡ್ವಿಗ್ ವ್ಯಾನ್ ಬೀಥೋವನ್ ( Ludwig Van Beethoven) , Western Classical ಸಂಗೀತದಲ್ಲಿ ಅತಿ ದೊಡ್ಡ ಹೆಸರು . ಕರ್ನಾಟಕ ಸಂಗೀತದಲ್ಲಿ ಪುರಂದರ ದಾಸರು ಹೇಗೋ , ವಿಶ್ವ ಸಂಗೀತ ಕ್ಷೇತ್ರದಲ್ಲಿ ಬಿಥೋವನ್ ಕೂಡ . ಕ್ಲಾಸಿಕಲ್ ಸಂಗೀತ ಕಲಿಯುವ ಪ್ರತಿಯೊಬ್ಬ ವಿದ್ಯಾರ್ಥಿಯ ಮಹದಾಸೆ ಬಿಥೋವನ್ ಅವರ ಸಿಂಫೊನಿ ಗಳಲ್ಲಿ ನುಡಿಸಬೇಕು ಅನ್ನುವುದು .  ಅತ್ಯುತ್ತಮ Composer ಆಗಿದ್ದ ಬೀಥೋವನ್ ಕಿವುಡ ಹಾಗೂ ಮೂಕನಾಗಿದ್ದ ಅಂದರೆ ಆಶ್ಚರ್ಯ ಆಗುತ್ತೆ ಅಲ್ವಾ ?  ಈ ವಾರದ "ವ್ಯಕ್ತಿ ಪರಿಚಯ " ಸರಣಿಯಲ್ಲಿ ಬೀಥೋವನ್ ಬಗ್ಗೆ ಇನ್ನಷ್ಟು ತಿಳಿಯೋಣ ಬನ್ನಿ .    ಬೀಥೋವನ್ ಅವರ ಇನ್ನೂ ಕೆಲವು ಚಿತ್ರಗಳು , ಹಾಗೂ ಅವರ ಸಂಗೀತದ ತುಣುಕುಗಳನ್ನು ನಮ್ಮ ವೆಬ್ಸೈಟ್ https://kelirondukatheya.org/ep113 ರಲ್ಲಿ ನೋಡಬಹುದು .   
Ep112 - [ ವ್ಯಕ್ತಿ ಪರಿಚಯ ] ಮೇರಿ ಕೋಮ್
ಕೇಳಿರೊಂದು ಕಥೆಯ
access_time27 days ago
"ವ್ಯಕ್ತಿ ಪರಿಚಯ " ಸರಣಿಯ  ಮೊದಲನೇ ಕಂತು ಇದು .  ಪ್ರಸಿದ್ಧ ವ್ಯಕ್ತಿಗಳ ಜೀವನದ ತುಣುಕುಗಳನ್ನು   ಮಕ್ಕಳಿಗೆ ಅವರದೇ  ರೀತಿಯಲ್ಲಿ  ತಿಳಿ ಹೇಳುವ ಪ್ರಯತ್ನ  ಇದು .   ಈ ಸಲದ ವ್ಯಕ್ತಿ ಪ್ರಪಂಚದೆಲ್ಲೆಡೆ "Confident Mary " ಅಂತಲೇ ಕರೆಸಿಕೊಂಡ ಬಾಕ್ಸಿಂಗ್ ಚಾಂಪಿಯನ್ ಮೇರಿ ಕೋಮ್ .  ಮೇರಿ ಬಾಕ್ಸಿಂಗ್ ನಲ್ಲಿ  ಎಷ್ಟು ಪ್ರಸಿದ್ದರೋ ಅವರ ಹಿನ್ನಲೆ  ಕೂಡ ಅಷ್ಟೇ ರೋಚಕವಾದದ್ದು .  http://kelirondukatheya.org/stories/ep112 ರಲ್ಲಿ ಮೇರಿ ಅವರ  ಕೆಲವು  ಚಿತ್ರಗಳನ್ನೂ , ಅವರ  ಬಗ್ಗೆ ಇನ್ನೂ  ಕೆಲವು ವಿಷಯಗಳನ್ನು ತಿಳಿದುಕೊಳ್ಳಬಹುದು . 
Ep111 - ಸೂರ್ಯ, ಚಂದ್ರ, ಮತ್ತು ಸಮುದ್ರಗಳ ಕತೆ
ಕೇಳಿರೊಂದು ಕಥೆಯ
access_time1 month ago
ಸೂರ್ಯ ಚಂದ್ರರು ಒಂದು  ಕಾಲದಲ್ಲಿ  ನಮ್ಮ  ನಿಮ್ಮ  ಥರ  ಭೂಮಿಯ ಮೇಲೆ ಇದ್ರಂತೆ . ! . ಆಶ್ಚರ್ಯ ಆಗುತ್ತಲ್ಲಾ ?  ಹೌದು , ಸೂರ್ಯ ಚಂದ್ರರು ಮನುಷ್ಯರ ಥರ  ಮನೆಯಲ್ಲಿ  ಇರ್ತಿದ್ರು ಅಂತ  ಆಫ್ರಿಕನ್ನರು  ನಂಬುತ್ತಾರಂತೆ .  ಹಾಗಾದ್ರೆ , ಈಗ್ಯಾಕೆ ಆಕಾಶದಲ್ಲಿ  ಇರ್ತಾರೆ ? ತಿಳಿಯೋಕೆ , ಈ ಕತೆ  ಕೇಳಿ . 
Ep110 - ಸಿಡುಕ ಸಿದ್ದ ಹಾಗೂ ಗುಹೆಯ ಮನುಷ್ಯ
ಕೇಳಿರೊಂದು ಕಥೆಯ
access_time2 months ago
ಸಿಡುಕ ಸಿದ್ದನಿಗೆ ಸಿಟ್ಟು ಎಷ್ಟು ಜಾಸ್ತಿಯೋ ಪೆದ್ದುತನ ಸ್ವಲ್ಪ ಅದಕ್ಕಿಂತ ಜಾಸ್ತಿ.  ಈ ಕತೆಯಲ್ಲಿ ಸಿದ್ಧನಿಗೆ ಗುಹೆಯ ಮನುಷ್ಯನಿಂದ ಊಹಿಸಲಾರದಷ್ಟು ಐಶ್ವರ್ಯ ಸಿಕ್ಕರೂ, ಪಾಪ ಅದನ್ನು ಉಳಿಸಿಕೊಳ್ಳೋಲಾಗಲಿಲ್ಲ. ಹೇಗೆ, ಯಾಕೆ ಅನ್ನುವುದನ್ನು ಕತೆಯಲ್ಲಿ ಕೇಳೋಣ.   ನಮಗೆ ಎಷ್ಟು ಅನುಭವ ಇದೆಯೋ ಅಷ್ಟೇ ದಕ್ಕುವುದು ಅನ್ನುವುದಕ್ಕೆ ಈ ಕತೆ ಉತ್ತಮ ಉದಾಹರಣೆ.
Repeat - ಪಾತ್ರೆ ಮರಿ ಇಟ್ಟ ಕತೆ
ಕೇಳಿರೊಂದು ಕಥೆಯ
access_time2 months ago
ಕೇಳಿರೊಂದು  ಕಥೆಯ  ಸರಣಿಯ  ಕತೆಗಳಲ್ಲಿ  ನಾಸ್ರುದ್ದೀನ್  ಹೊಡ್ಜಾನ ಕತೆಗಳು ಅತಿ  ಜನಪ್ರಿಯ.  2019 ರಲ್ಲಿ ಪ್ರಕಟವಾಗಿದ್ದ  ಈ ಕತೆಯ ಮರು  ಪ್ರಸಾರ .  ನಾಸ್ರುದ್ದೀನ್ ಹೊಡ್ಜ ಪಕ್ಕದ ಮನೆಯವನ ಹತ್ತಿರ ಪಾತ್ರೆ ಸಾಲ ಪಡೆದು ವಾಪಸ್ ಕೊಡುವಾಗ ಪಾತ್ರೆ ಅಷ್ಟೇ ಅಲ್ದೆ ಅದರ 'ಮರಿ ' ಯನ್ನೂ ಹೇಗೆ ಕೊಡಲು ಸಾಧ್ಯ ? ಪಾತ್ರೆ ಎಲ್ಲಾದ್ರೂ ಮರಿ ಇಡುತ್ಯೆ ? ಆದರೆ ' ಕೊಟ್ಟೋನು ಕೋಡಂಗಿ! ಇಸ್ಕೊಂಡೋನು ಈರಭದ್ರ " ಅನ್ನೋ ಗಾದೆಯ ಹಾಗೆ , ಆ ಪಕ್ಕದ ಮನೆಯವನಿಗಾದ್ರೂ ಗೊತ್ತಾಗಬೇಡವೇ  ?  ಹೊಡ್ಜ ಯಾಕೆ ಹೀಗೆ ಮಾಡಿದ , ಮುಂದೇನಾಯ್ತು ಅನ್ನೋದನ್ನು ಈ ಕತೆಯಲ್ಲಿ ಕೇಳಿ  .   
Ep109 - ಹಸು ಮತ್ತು ನೊಣ
ಕೇಳಿರೊಂದು ಕಥೆಯ
access_time3 months ago
ಹಸುಗಳಿಗೂ ಅವುಗಳ ಸುತ್ತ ಸದಾ ಜುಯ್ ಅಂತ ಸುತ್ತುವ ನೊಣಗಳಿಗೂ ಅದೇನೋ ವಿಚಿತ್ರ ಸಂಬಂಧ . ವೈಜ್ಞಾನಿಕವಾಗಿ ನೊಣಗಳಿಂದ ಕಣ್ಣಿನ ರೋಗ  ( Pink Eye ) ಬರುವುದು ಸಹಜವಾದರೂ ,  ಆಫ್ರಿಕಾದ ಜಾನಪದ ಕತೆಗಳ ಪ್ರಕಾರ ನೊಣಗಳು ತೊಂದರೆ ಕೊಡುವುದಕ್ಕೆ ಹಸುಗಳೇ ಕಾರಣವಂತೆ .  !  
Ep108 - ಬಾವಲಿಗಳು ರಾತ್ರಿಯಷ್ಟೇ ಹೊರಗೇಕೆ ಬರುತ್ತವೆ?
ಕೇಳಿರೊಂದು ಕಥೆಯ
access_time3 months ago
ಬಾವಲಿ ( Bat ) ವಿಚಿತ್ರ  ಹಾಗೂ ಕುತೂಹಲಕಾರಿ ಜೀವಿ . ಅತ್ತ ಪ್ರಾಣಿಯೂ ಅಲ್ಲದೆ , ಇತ್ತ ಹಕ್ಕಿಯೂ ಅಲ್ಲದ ಬಾವಲಿ ರಾತ್ರಿ ಅಷ್ಟೇ ಹೊರ ಬರುತ್ತವೆ .  ವೈಜ್ಞಾನಿಕವಾಗಿ ಬಾವಲಿಗಳಿಗೆ ದೃಷ್ಟಿ ಅಷ್ಟು ಬಲವಾಗಿ ವೃದ್ಧಿಯಾಗಿಲ್ಲ , ಬದಲಾಗಿ Echo location , ಅಂದರೆ ಸೂಕ್ಷ್ಮ ಧ್ವನಿ  ತರಂಗಗಳ ನೆರವಿನಿಂದ ದಾರಿ , ಊಟ  ಹುಡುಕುತ್ತವೆ  . ನೂರಾರು ವರ್ಷಗಳ ಹಿಂದೆ ಆಫ್ರಿಕಾದ ಜನರಿಗೆ ಈ ಬಾವಲಿ ರಾತ್ರಿಯಷ್ಟೇ ಹೊರಗೇಕೆ ಬರುತ್ತದೆ ಅನ್ನುವ ಪ್ರಶ್ನೆಗೆ  ಸೊಗಸಾದ ಕತೆಯ ಮೂಲಕ ವಿವರಿಸಿದ್ದಾರೆ .   ಕೇಳೋಣ ಬನ್ನಿ .   
[ ವಿಶೇಷ ] - ದೀಪಾವಳಿ ಹಬ್ಬ
ಕೇಳಿರೊಂದು ಕಥೆಯ
access_time4 months ago
ದೀಪಾವಳಿ ಹಬ್ಬದ ಶುಭಾಶಯಗಳು ಎಲ್ಲರಿಗೂ ಗೆಳೆಯರೇ .   ದೀಪಾವಳಿ ಭಾರತೀಯರಿಗೆ ವಿಶೇಷ ಹಬ್ಬ . ಈ ಹಬ್ಬದ ಹಿಂದೆ ಬಹಳಷ್ಟು ಉಪಕತೆಗಳಿವೆ .  ಈ ಕಂತಿನಲ್ಲಿ ಈ ಹಬ್ಬದ ಬಗ್ಗೆ  ಮೂರು ಕತೆಗಳನ್ನು  ಕೇಳೋಣ .    
Ep107 - ಗುಡುಗು ಮತ್ತು ಸಿಡಿಲು
ಕೇಳಿರೊಂದು ಕಥೆಯ
access_time4 months ago
ಗುಡುಗು , ಸಿಡಿಲು ಮಳೆಗಾಲದಲ್ಲಿ ಸರ್ವೇ ಸಾಮಾನ್ಯ .  ಗುಡುಗು ಕೇಳುವ ಮೊದಲೇ ಸಿಡಿಲು ಕಾಣುವುದೂ ಸಾಮಾನ್ಯ .  ಆದರೆ , ಸಾವಿರಾರು ವರ್ಷಗಳ ಹಿಂದೆಯೇ  ಇದನ್ನು ಮನಗಂಡು ಗುಡುಗು , ಸಿಡಿಲಿನ ಸುತ್ತ ಹೆಣೆದಿರುವ ಈ ಕತೆ ,  ಸಿಡಿಲನ್ನು ಚೂಟಿ ಟಗರಿಗೂ ,  ಗೂಡುಗನ್ನು  ಮಗನನ್ನು ಸರಿ ಹಾದಿಗೆ  ತರುವ ಅಮ್ಮನಿಗೂ  ಹೋಲಿಸುವ  ಮೂಲಕ ಕೇಳುವುದಕ್ಕೆ  ವಿಶಿಷ್ಟ  ಅನುಭವ  ಕೊಡುತ್ತದೆ .  Thunder and Lightning are common phenomena. This folktale compare lightning to a mischievous Ram and the thunder as the mom that follows her son around scolding him for his mischiefs.  A unique story. 
Ep106 - ಸುಳ್ಳು ಹೇಳದಿರುವ ಮನುಷ್ಯ
ಕೇಳಿರೊಂದು ಕಥೆಯ
access_time5 months ago
ಸುಳ್ಳು ಹೇಳುವುದು ಅಂದರೆ ಸಹಜ . ಅದರಲ್ಲೂ , ಕೆಲವರಿಗೆ ಸುಳ್ಳು ಹೇಳುವುದು ಚಟ ವಾಗಿ ಬಿಟ್ಟಿರುತ್ತದೆ . ಹಾಗಿರುವಾಗ , ಒಂದೂ ಸುಳ್ಳು ಹೇಳದೆ ಇರುವ  ಮನುಷ್ಯ  ಒಬ್ಬ  ಬದುಕಿದ್ದ  ಅಂದರೆ ಆಶ್ಚರ್ಯ  ಆಗುತ್ತೆ  ಅಲ್ವಾ ?  ಈ ಕತೆಯಲ್ಲಿ ಆ ಮನುಷ್ಯನನ್ನ  ಭೇಟಿ ಮಾಡೋಣ . ಅವನಿಂದ ಸುಳ್ಳು ಹೇಳಿಸೋಕೆ ಪಾಡು ಪಟ್ಟ ರಾಜನ ಬಗ್ಗೆಯೂ ಕೇಳೋಣ 
Ep105 - ಸಿಂಹವನ್ನು ಸೋಲಿಸಿದ ತೋಳ ( ಉತ್ತರ ಕರ್ನಾಟಕ ಶೈಲಿ)
ಕೇಳಿರೊಂದು ಕಥೆಯ
access_time5 months ago
ಕಳೆದ  ವಾರ ಇದೇ  ಕತೆಯ ಸರಳ  ಗನ್ನಡ  ಅವತರಣಿಕೆ ( version ) ಅನ್ನು ಮಾಡಿದ್ದೆವು . ಈ ವಾರ , ಜೈರಾಜ್ ಗಲಗಲಿ ಅವರು ಈ ಕತೆಯನ್ನು ಉತ್ತರ ಕರ್ನಾಟಕ ಶೈಲಿ ಒಳಗ ಹೇಳಿದ್ದಾರೆ .  ನೀವೂ , ನಾವೂ ಕೇಳಿ  ಮಜಾ ತಗಳ್ಳೋಣಾಂತ ? ಏನಂತೀರಿ ? 
Ep104 - ಸಿಂಹವನ್ನು ಸೋಲಿಸಿದ ತೋಳ
ಕೇಳಿರೊಂದು ಕಥೆಯ
access_time5 months ago
ಪಂಚತಂತ್ರದ ಕತೆಗಳಲ್ಲಿ ನರಿ ಬುದ್ದಿವಂತಿಕೆ  ಹಾಗೂ ಕಪಟತನಕ್ಕೆ ಹೆಸರುವಾಸಿ . ಆಫ್ರಿಕಾದ ಜಾನಪದ ಕತೆಗಳಲ್ಲಿ  ತೋಳಕ್ಕೆ ನರಿಯ ಸ್ಥಾನ .   ಈ ಕತೆಯಲ್ಲಿ ಹಿಂದೆ ತೋಳದಿಂದ ಆದ ಮೋಸ ಮರೆಯದ ಸಿಂಹಕ್ಕೆ ತೋಳ ಮತ್ತೆ ಸಿಕ್ಕಿ  ಬೀಳುತ್ತದೆ . ತೋಳ ಸಿಂಹದಿಂದ ಪಾರು ಹೇಗೆ ಆಗುತ್ತದೆ ಅನ್ನುವುದನ್ನು ಕೇಳೋಣ . 
Ep103 - ಸೋರೆಕಾಯಿ ಮಕ್ಕಳು( The Calabash Kids )
ಕೇಳಿರೊಂದು ಕಥೆಯ
access_time5 months ago
ಆಫ್ರಿಕಾದಲ್ಲಿ  ತಮಟೆಯ ಆಕಾರದಲ್ಲಿರೋ ಸೋರೆಕಾಯಿ ಸಿಗುತ್ತದೆ . ಸೋರೆಕಾಯಿಯ ಉಪಯೋಗ ಕೂಡ  ಹತ್ತು  ಹಲವು  ರೀತಿಯಲ್ಲಿ .  ಅಡುಗೆಯಂತೂ  ಹೌದು , ಆದರೆ ಅಲ್ಲಿನ ಜನರು ಸೋರೆಕಾಯಿಯನ್ನು  ಒಣಗಿಸಿ , ತಿರುಳು ತೆಗೆದು , ಅದನ್ನು ನೀರು ತುಂಬುವ  ಬಿಂದಿಗೆಯಾಗಿ , ಸಾಮಗ್ರಿ  ತುಂಬಿಡುವ ಪಾತ್ರೆಯಾಗಿ ಉಪಯೋಗಿಸುತ್ತಾರೆ .  ಈ ಸೋರೆಕಾಯಿಯ ಬಗ್ಗೆ ಕೂಡ ಜನಪದ ಕತೆ ಇದೆ ಅಂದರೆ ಆಶ್ಚರ್ಯ ಆಗುತ್ತೆ ಅಲ್ವೇ .   ಈ ಕತೆಯಲ್ಲಿ , ಮಕ್ಕಳಿಲ್ಲದ ಹೆಣ್ಣು ಮಗಳಿಗೆ ಸೋರೆಕಾಯಿಯ ಬೀಜಗಳಿಂದ ಮಕ್ಕಳು ಹುಟ್ಟಿದ  ರೋಚಕ ಕತೆ ಕೇಳೋಣ . 
Ep102 - ಹಕ್ಕಿಗಳ ರಾಜ ಯಾರು ?
ಕೇಳಿರೊಂದು ಕಥೆಯ
access_time6 months ago
ಹಕ್ಕಿಗಳಿಗೆ ಸಿಂಹ ನಂತೆ ರಾಜ ಒಬ್ಬನಿದ್ದರೆ ಹೇಗಿರ್ತಿತ್ತು ಅನ್ನುವ ಪ್ರಶ್ನೆಯನ್ನು  ಕತೆಯ ರೂಪದಲ್ಲಿ ಸೊಗಾಸಾಗಿ ವಿವರಿಸುತ್ತದೆ  ಈ ಕತೆ 
Ep101 - ಕತೆಗಳು ಹೇಗೆ ಹುಟ್ಟಿದವು?
ಕೇಳಿರೊಂದು ಕಥೆಯ
access_time6 months ago
ಆಫ್ರಿಕಾದ ಜಾನಪದ ಕತೆಗಳು ಮನುಷ್ಯ ತನ್ನ ಸುತ್ತ ಮುತ್ತಲಿನ ಪ್ರಾಣಿ , ಪಕ್ಷಿ , ಪರಿಸರವನ್ನು  ಅರ್ಥ ಮಾಡಿಕೊಂಡ  ಬಗೆಯನ್ನು  ತಮ್ಮದೇ ರೀತಿಯಲ್ಲಿ ಹಿಡಿದಿಡುತ್ತವೆ .   ಆದರೆ , ಈ ಕತೆಗಳು ಹೇಗೆ ಹುಟ್ಟಿದವು ಅನ್ನುವುದಕ್ಕೂ ಒಂದು ಕತೆ ಇದೆ ಅಂದರೆ ಆಶ್ಚರ್ಯ ಆಗುತ್ತೆ ಅಲ್ವಾ ?  ಹೆಚ್ಚು ತಿಳಿಯಲು  ಈ ವಾರದ ಕತೆ ಕೇಳಿ . 
Ep100 - ಅನಾಂಸಿ ಮತ್ತು ಮಾಯಾ ಮಡಿಕೆ
ಕೇಳಿರೊಂದು ಕಥೆಯ
access_time6 months ago
"ಆಫ್ರಿಕಾದ ಜಾನಪದ ಕತೆಗಳು " ಮಾಲಿಕೆಯಲ್ಲಿ ಈ ಕತೆ ಮೊದಲನೆಯದು . ಒಟ್ಟು ನಾವು ಮಾಡಿದ ಕತೆಗಳಲ್ಲಿ ಒಂದು ನೂರನೆಯದು ಕೂಡ .  ಮತ್ತೊಂದು ವಿಶೇಶ - ಈ ಕತೆ ಖ್ಯಾತ ಗಾಯಕಿ , ಕಲಾವಿದೆ ಶ್ರೀಮತಿ ಎಂ ಡಿ ಪಲ್ಲವಿ ಅವರ ನಿರೂಪಣೆ .    ಅನಾಂಸಿ ಅನ್ನುವ ಜೇಡರ ಹುಳು ಪ್ರಪಂಚದ ವಿವೇಕ , ಬುದ್ದಿ ಶಕ್ತಿಯನ್ನೆಲ್ಲ ಒಟ್ಟು ಮಾಡಿ ಮಡಿಕೆಯಲ್ಲಿ ಕೂಡಿಟ್ಟು ಕೊಂಡಾಗ ಆಗಿದ್ದೇನು ? ಮುಂದಿನದನ್ನು ಪಲ್ಲವಿಯವರ ದನಿಯಲ್ಲೇ ಕೇಳಿ . 
Ep99 - ನಿದ್ರೆ ಬರದಿದ್ದ ರಾಜ
ಕೇಳಿರೊಂದು ಕಥೆಯ
access_time6 months ago
ಈ ಸಲದ ಕತೆ ಉತ್ತರ ಕರ್ನಾಟಕ ಶೈಲಿಯಲ್ಲಿ  ನಿರೂಪಿಸಿರುವ ರಾಜನೊಬ್ಬನ  ಕತೆ .  ರಾಜನಿಗೆ ಏನು ಮಾಡಿದರೂ ರಾತ್ರಿ  ನಿದ್ರೆ ಬರುತ್ತಿರಲಿಲ್ಲ .  ಎಷ್ಟೇ ಮದ್ದು , ಗುಳಿಗೆ  ತಿಂದರೂ , ವ್ರತ , ದಾನ ಮಾಡಿದರೂ ನಿದ್ರೆ ಮಾತ್ರ ದೂರವೇ  ಉಳಿದಿತ್ತು .  ಅಷ್ಟೆಲ್ಲ ಕಷ್ಟ ಪಟ್ಟರೂ ಗುಣವಾಗದ ರಾಜನ ನಿದ್ರೆ ಖಾಯಿಲೆಯನ್ನ   ಒಬ್ಬ ಸಾಮಾನ್ಯ ಮರ ಕಡಿಯುವವ ಗುಣ ಪಡಿಸಿದ್ದು ಹೇಗೆ . ?    "ಮಂಗ್ಯಾ , ಮೊಸಳಿ ಕತಿ " ಆದಮೇಲೆ ಉತ್ತರ ಕರ್ನಾಟಕ ಶೈಲಿಯಲ್ಲಿ ನಿರೂಪಿಸಿರುವ ಎರಡನೇ ಕತೆ ಇದು . 
Repeat - ಶಮಂತಕ ಮಣಿಯ ಕತೆ
ಕೇಳಿರೊಂದು ಕಥೆಯ
access_time7 months ago
ಈ ಕಂತು ೨೦೧೯ ರ ಗಣೇಶ ಹಬ್ಬದ ಸಮಯದಲ್ಲಿ ಮಾಡಿದ ಕತೆ .   ಈ ವರ್ಷದ ಗೌರಿ ಗಣೇಶ ಹಬ್ಬಕ್ಕೆ ಶಮಂತಕ ಮಣಿಯ ಕತೆ . 
Ep98 - ಸಿಂಹವನ್ನು ಸೋಲಿಸಿದ ಮೊಲದ ಕತೆ
ಕೇಳಿರೊಂದು ಕಥೆಯ
access_time7 months ago
ಏನು ? ಸಿಂಹದಂಥ  ಬಲಿಷ್ಠ  ಪ್ರಾಣಿ  ಎಲ್ಲಿ ? ಮೊಲದಂಥ  ಪೀಚು  ಪ್ರಾಣಿ  ಎಲ್ಲಿ ?  ಆದರೂ ಸಿಂಹದ ಶಕ್ತಿಯ ಮುಂದೆ ಮೊಲದ  ಯುಕ್ತಿಯೇ ಮೇಲಾಯಿತು .  ಒಂದೊಂದು ಸಲ ನಮ್ಮ  ಮುಂದೆ  ಕೆಟ್ಟದ್ದು  ನಡೆಯುತ್ತಿದ್ದರೂ , ಅಸಹಾಯಕರಾಗುವುದು ಸಹಜ . ಅದರಲ್ಲೂ ಎದುರಾಳಿ ಬಲಿಷ್ಠನಾಗಿದ್ದರಂತೂ , ಇನ್ನೇನು ಎಲ್ಲ ಮುಗಿದೇ ಹೋಯಿತು ಅನ್ನಿಸುವಾಗ , ಈ  ಕತೆ ಸ್ಫೂರ್ತಿ ಕೊಡುತ್ತದೆ . 
Ep97 - ಟೋಪಿ ಮಾರುವವ ಹಾಗೂ ಮಂಗಗಳು
ಕೇಳಿರೊಂದು ಕಥೆಯ
access_time7 months ago
" ಟೋಪಿ ಬೇಕಾ ಟೋಪಿ " ಅಂತ  ಕೂಗುತ್ತಾ  ಬರುವ  ಟೋಪಿ ಮಾರುವವನ ಕತೆ  ಶಾಲೆಗಳಲ್ಲಿ ನಾಟಕದ ರೂಪದಲ್ಲೋ , ಪಠ್ಯದಲ್ಲೋ ನೋಡದವರು ಕಡಿಮೆ .  ಈಗ  ಈ ಕತೆಯನ್ನು ಈಗಿನ  ಪುಟಾಣಿಗಳೂ ಕೇಳಬಹುದು .  ಟೋಪಿ ಮಾರುವವನ ಟೋಪಿಗಳನ್ನು ಚೇಷ್ಟೆ ಮಂಗಗಳು ಹೊತ್ತುಕೊಂಡು ಮರದ   ಮೇಲೆ ಹತ್ತಿ ಕುಳಿತಾಗ ಟೋಪಿ ಮಾರುವವ  ವಾಪಸ್ ಪಡೆಯೋದಕ್ಕೆ ಏನೆಲ್ಲಾ ಸಾಹಸ  ಮಾಡಬೇಕಾಯ್ತು ಅನ್ನುವುದನ್ನು  ಈ ಕತೆ ತಿಳಿ  ಹಾಸ್ಯದೊಂದಿಗೆ ಹೇಳುತ್ತದೆ .     
Ep96 - ಬಾಯಿಬಡುಕ ಆಮೆ ಮತ್ತು ಬಾತುಕೋಳಿಗಳು
ಕೇಳಿರೊಂದು ಕಥೆಯ
access_time7 months ago
ಮಾತು ಹಿತ , ಮಿತವಾಗಿರಬೇಕು ಅನ್ನುತ್ತಾರೆ .  ಜತೆಗೆ ಸಮಯೋಚಿತವಾಗಿರಬೇಕು ಕೂಡ .  ಸಲ್ಲದ  ಜಾಗದಲ್ಲಿ ಬೇಡ ಮಾತುಗಳಾಡಿದರೆ ತೊಂದರೆ ತಪ್ಪಿದ್ದಲ್ಲ ಅನ್ನುವುದಕ್ಕೆ ಈ ಕತೆ ಒಳ್ಳೆಯ ಉದಾಹರಣೆ .  ಸಹಾಯ ಬೇಕಾಗಿದ್ದ ಆಮೆಯೊಂದಕ್ಕೆ , ಬಾತುಕೋಳಿಗಳು ಸಹಾಯ ಮಾಡುವುದಕ್ಕೆ ಮೊದಲು ಒಂದು  ಷರತ್ತು ಹಾಕಿದವು .  ಆಮೇಲೆ ಏನಾಯ್ತು ಅನ್ನೋದನ್ನ ಕತೆಯಲ್ಲಿ  ಕೇಳಿ . 
Ep95 - ಪಾರಿವಾಳ ಮತ್ತು ಇರುವೆಯ ಕತೆ
ಕೇಳಿರೊಂದು ಕಥೆಯ
access_time8 months ago
ಉಪಕಾರ ಮಾಡಿದವರನ್ನು ಇಂದಿಗೂ ಮರೆಯಬಾರದು ಅಂತ  ಗಾದೆಯ ಹಾಗೆ , ಪುಟ್ಟ ಇರುವೆಯೂ , ದೊಡ್ಡ ಪಾರಿವಾಳವೂ ಒಬ್ಬರಿಗೊಬ್ಬರು  ಉಪಕಾರ  ಮಾಡಿದ್ದು  ಹೇಗೆ . ? ಪುಟ್ಟ  ಇರುವೆಯಿಂದ  ದೊಡ್ಡ ಪಾರಿವಾಳಕ್ಕೆ ಆದ  ಉಪಕಾರವಾದರೂ ಏನು . ? ಬನ್ನಿ,  ಈ ಕತೆಯಲ್ಲಿ  ತಿಳಿದುಕೊಳ್ಳೋಣ . 
Ep94 - ಚಿನ್ನದ ಮೊಟ್ಟೆಯ ಕತೆ
ಕೇಳಿರೊಂದು ಕಥೆಯ
access_time8 months ago
ಮೊಟ್ಟೆ ಇಡುವ ಕೋಳಿ , ಬಾತು ಕೋಳಿಯ ಬಗ್ಗೆ ಕೇಳಿರ್ತೀರ  , ಆದರೆ ಚಿನ್ನದ ಮೊಟ್ಟಿ ಇಡುವ ಬಾತು ಕೋಳಿಯ ಬಗ್ಗೆ ಕೇಳಿದ್ದೀರಾ ?   ಚಿನ್ನದ ಮೊಟ್ಟೆ ಇಡುವ  ಬಾತು ಕೋಳಿಯನ್ನು  ನೋಡಿ  ರೈತನ  ಹೆಂಡತಿ ಅಸೆ ಪಟ್ಟಿದ್ದೆ ಬೇರೆ , ಆದರೆ ಆದದ್ದೇ ಬೇರೆ .  ದುರಾಸೆ ಪಟ್ಟರೆ ದುಃಖ ತಪ್ಪಿದ್ದಲ್ಲ  ಅನ್ನುವುದಕ್ಕೆ ಈ ಕತೆ ಒಳ್ಳೆಯ  ಉದಾಹರಣೆ .       
Ep93 - ಮರ ಕಡಿಯುವವನ ಕತೆ
ಈ ವಾರ ಮತ್ತೊಂದು ಜನಪ್ರಿಯ ಕತೆ " ಮರ ಕಡಿಯುವವನ ಕತೆ ". ಪಂಚತಂತ್ರದ ಕತೆಗಳು ಅಂದ ತಕ್ಷಣ ನೆನಪು ಬರುವ ಕತೆಗಳಲ್ಲಿ ಈ ಕತೆ ಪ್ರಮುಖವಾದದ್ದು .    ಪ್ರಾಮಾಣಿಕತೆ , ಸತ್ಯ ನಿಷ್ಠತೆ , ಸರಳತೆ ಅಂತಹ ಗುಣಗಳು ಈ ಕತೆಯಲ್ಲಿ ವಿಶೇಷವಾಗಿ ಕಾಣಸಿಗುತ್ತವೆ . 
Ep92 – ತೋಳ ಮತ್ತು ಮೇಕೆ ಮರಿಯ ಕತೆ
ದಾರಿ ತಪ್ಪಿಸಿಕೊಂಡ ಮೇಕೆ ಮರಿ ಒಂದು ತೋಳದ ಕೈಗೆ ಸಿಕ್ಕಾಗ , ತುಂಬಾ ಭಯವಾದರೂ , ಸರಿಯಾದ ಸಮಯಕ್ಕೆ ಉಪಾಯವೊಂದನ್ನು ಮಾಡಿ ತೋಳವನ್ನು ಹೆದರಿ ಓಡಿ ಹೋಗುವಂತೆ ಮಾಡ್ತು .   ತೋಳ ಹೆದರಿ ಓಡಿದ್ದು  ಯಾಕೆ ? ಅಂತ ತಿಳಿಯಲು ಈ ಮುದ್ದಾದ ಕತೆ ಕೇಳಿ
Ep92 - ತೋಳ ಮತ್ತು ಮೇಕೆ  ಮರಿಯ ಕತೆ
ದಾರಿ ತಪ್ಪಿಸಿಕೊಂಡ ಮೇಕೆ ಮರಿ ಒಂದು ತೋಳದ ಕೈಗೆ ಸಿಕ್ಕಾಗ , ತುಂಬಾ ಭಯವಾದರೂ , ಸರಿಯಾದ ಸಮಯಕ್ಕೆ ಉಪಾಯವೊಂದನ್ನು ಮಾಡಿ ತೋಳವನ್ನು ಹೆದರಿ ಓಡಿ ಹೋಗುವಂತೆ ಮಾಡ್ತು .   ತೋಳ ಹೆದರಿ ಓಡಿದ್ದು  ಯಾಕೆ ? ಅಂತ ತಿಳಿಯಲು ಈ ಮುದ್ದಾದ ಕತೆ ಕೇಳಿ .     
Ep91 - ಆಮೆ ಮತ್ತು ಮೊಲದ  ಕತೆ
ಇಂದಿನ ಸಂಚಿಕೆಯಲ್ಲಿ ಜನಪ್ರಿಯ ಕತೆ "ಆಮೆ ಮತ್ತು ಮೊಲ "ದ ಕತೆ .   ಪ್ರಪಂಚದ ನಾನಾ ಭಾಷೆಗಳಲ್ಲಿ ಹೇಳಪಡುವ ಈ ಕತೆ ಮಕ್ಕಳಿಂದ ದೊಡ್ಡವರ ತನಕ ಎಲ್ಲರೂ ಕೇಳಿ ಖುಷಿ ಪಡಬಹುದಾದದ್ದು .  ನೀವೂ ಕೇಳಿ , ಬೇರೆಯವರಿಗೂ ತಿಳಿಸಿ .  ಕತೆಯನ್ನು ಕೇಳುವ ಅನುಭವವನ್ನು ಇನ್ನಷ್ಟು ಹೆಚ್ಚುಗೊಳಿಸಲು , ಈ ಕತೆ ಇರುವ ಪುಸ್ತಕವನ್ನು  ಮಕ್ಕಳಿಗೆ ಓದಿ ಹೇಳಿ . ನಂತರ , ನಮ್ಮ ವೆಬ್ಸೈಟ್ ನಲ್ಲಿರುವ ಚಿತ್ರ ಪುಟಗಳನ್ನು ಇಳಿಸಿಕೊಂಡು ಬಣ್ಣ ಹಚ್ಚಿ ಖುಷಿ ಪಡಿ .   
Ep90-ನರಿ ಮತ್ತು ಡೊಳ್ಳು
ನರಿ ಮತ್ತು ಡೊಳ್ಳು, ಪಂಚತಂತ್ರದ ಜನಪ್ರಿಯ ಕತೆಗಳಲ್ಲೊಂದು . ಕಾಡಿನಲ್ಲಿ ಬರುತ್ತಿದ್ದ ಸದ್ದು ಯಾವುದೋ ಭಯಂಕರ ಪ್ರಾಣಿಯದೇ ಇರಬೇಕು ಅಂತ ಹೆದರಿಕೆಯಿಂದ ಹೆಜ್ಜೆಯಿಡುತ್ತಿದ್ದ ನರಿಗೆ ಡೊಳ್ಳು ನೋಡಿ ಇಷ್ಟೇನಾ ಅಂತ ಅನ್ನಿಸಿತು . ಆದರೆ , ಡೊಳ್ಳು ಬಡಿಯುತ್ತಿದ್ದವರು ಯಾರು ? ತಿಳಿಯಲು ಕತೆ ಕೇಳಿ      
Ep89 - ಇನಿ ದನಿ - ಭಾಗ ನಾಲ್ಕು
" ಇನಿ ದನಿ " - ಸರಕಾರೀ ಹಿರಿಯ ಪ್ರಾಥಮಿಕ ಶಾಲೆ ,ನೆಟ್ಲ  ಮಕ್ಕಳು ನಡೆಸಿಕೊಡುತ್ತಿರುವ ಆಡಿಯೋ ಸರಣಿ .  ಈ ವಾರದ ಕಾರ್ಯಕ್ರಮದಲ್ಲಿ ಮಕ್ಕಳು "ತಾಯಿ ಶಾರದೆ " ಎಂಬ ಪದ್ಯ ,  "ಸರಕಾರೀ ಕನ್ನಡ ಶಾಲೆಯ " ಬಗ್ಗೆ  ಒಂದು ಪುಟ್ಟ  ಕತೆ , ಹಾಗೂ ಕೊನೆಯಲ್ಲಿ ಒಂದು ಸಂಭಾಷಣೆ. "ಅಯ್ಯೋ , ಸರಕಾರೀ ಶಾಲೆಯೇ ? ಅಲ್ಲೇನಿದೆ ? ಅಲ್ಲಿಗೆ ಯಾಕೆ ಮಕ್ಕಳನ್ನು ಕಳಿಸಬೇಕು ?" ಅನ್ನುವ ಈಗಿನ ಪರಿಸ್ಥಿತಿಯಲ್ಲಿ ಈ  ಶಾಲೆಯ ಮಕ್ಕಳು ತೋರಿಸಿರುವ ಕ್ರಿಯಾತ್ಮಕ ಶಕ್ತಿ , ಪ್ರತಿಭೆ ಈ ಆಡಿಯೋ ಸರಣಿಯಲ್ಲಿ ಸ್ಪಷ್ಟವಾಗಿ ಕಾಣಿಸಿದೆ .   "ಎಲ್ಲಾ ಶಾಲೆಗಳಲ್ಲಿ ಇಂತಹ ಕಾರ್ಯಕ್ರಮಗಳು ಇದ್ದರೆ  ಎಷ್ಟು ಚಂದ ? " ಅನ್ನುವ  ಪ್ರತಿಕ್ರಿಯೆಗಳು ಬಹಳಷ್ಟು ಬಂದಿವೆ .  ಈ ಕಂತು , "ಇನಿ ದನಿ " ಸರಣಿಯ ಕೊನೆಯ  ಕಂತು . ನಡೆಸಿಕೊಟ್ಟ ಎಲ್ಲಾ ಮಕ್ಕಳಿಗೂ , ಶಿಕ್ಷಕರಿಗೂ ಅಭಿನಂದನೆಗಳು .   
Ep87 - ಇನಿ ದನಿ - ಭಾಗ ಮೂರು
" ಇನಿ ದನಿ " - ಸರಕಾರೀ ಹಿರಿಯ ಪ್ರಾಥಮಿಕ ಶಾಲೆ ,ನೆಟ್ಲ  ಮಕ್ಕಳು ನಡೆಸಿಕೊಡುತ್ತಿರುವ ಆಡಿಯೋ ಸರಣಿ .  ಈ ವಾರದ ಕಾರ್ಯಕ್ರಮದಲ್ಲಿ ಮಕ್ಕಳು "ಮಂಗಳ ಗ್ರಹದಲ್ಲಿ ಪುಟ್ಟಿ " ಎಂಬ ಪದ್ಯ , "ಗಂಧರ್ವ  ಸೇನಾ " ಅನ್ನುವ ಹಾಸ್ಯ ನಾಟಕ  ನಡೆಸಿಕೊಡುತ್ತಾರೆ .  ಇಂಪಾದ ಹಿನ್ನಲೆ ಸಂಗೀತ , ಹಾಸ್ಯಭರಿತ ಸಂಭಾಷಣೆ ಇರುವ ಈ ನಾಟಕ ಹಾಗೂ ಮುದ್ದಾದ ಕಾವ್ಯ ವಾಚನ ಮಕ್ಕಳಿಗೆ ಇಷ್ಟವಾಗುವುದರಲ್ಲಿ ಸಂದೇಹವಿಲ್ಲ .   
Ep87 - ಇನಿ ದನಿ - ಭಾಗ ಎರಡು
" ಇನಿ ದನಿ " - ಸರಕಾರೀ ಹಿರಿಯ ಪ್ರಾಥಮಿಕ ಶಾಲೆ ,ನೆಟ್ಲ  ಮಕ್ಕಳು ನಡೆಸಿಕೊಡುತ್ತಿರುವ ಆಡಿಯೋ ಸರಣಿ .  ಈ ವಾರದ ಕಾರ್ಯಕ್ರಮದಲ್ಲಿ "ಬೆಣ್ಣೆ  ಕರಗಿತು " ಅನ್ನುವ ನಾಟಕ ನಡೆಸಿಕೊಡುತ್ತಾರೆ . ಇಂಪಾದ ಹಿನ್ನಲೆ ಸಂಗೀತ , ಹಾಸ್ಯಭರಿತ ಸಂಭಾಷಣೆ ಇರುವ ಈ ನಾಟಕ ಮಕ್ಕಳಿಗೆ ಇಷ್ಟವಾಗುವುದರಲ್ಲಿ ಸಂದೇಹವಿಲ್ಲ .  ಕದ್ದು ತಂದ ಬೆಣ್ಣೆಯ ಸಲುವಾಗಿ ಜಗಳವಾಡುತ್ತಿದ್ದ ಎರಡು ಬೆಕ್ಕುಗಳಿಗೆ ಚಳ್ಳೆಹಣ್ಣು ತಿನಿಸುವ ಯೋಜನೆ ಮಾಡಿದ ಮಂಗಪ್ಪ ತಾನೇ ಪೇಚಿಗೆ ಸಿಕ್ಕಿದ  ಈ ಕತೆ ಕೇಳೋಕೆ ಬಲು ಮೋಜು .     
Ep86 - ಇನಿ ದನಿ - ಭಾಗ ಒಂದು
" ಇನಿ ದನಿ " - ಸರಕಾರೀ ಹಿರಿಯ ಪ್ರಾಥಮಿಕ ಶಾಲೆ ,ನೆಟ್ಲ  ಮಕ್ಕಳು ನಡೆಸಿಕೊಡುತ್ತಿರುವ ಆಡಿಯೋ ಸರಣಿ .  ಈ ವಾರದ ಕಾರ್ಯಕ್ರಮದಲ್ಲಿ ಚೂಟಿ ಮಕ್ಕಳಿಂದ ಪುಟ್ಟ ಹಾಡು , ಕಥೆ ನಿರೂಪಣೆ  , ನಾಟಕ , ಪ್ಲಾಸ್ಟಿಕ್ ಬಳಕೆಯ ಬಗ್ಗೆ ಕೆಲವು ಮಾತುಗಳು.  " ಕೇಳಿರೊಂದು ಕಥೆಯ "  ತಂಡಕ್ಕೆ ಇದೊಂದು ವಿನೂತನ ಪ್ರಯತ್ನ .  ನೀವೂ ಕೇಳಿ , ನಿಮ್ಮ ಮಕ್ಕಳಿಗೂ ಕೇಳಿಸಿ . ಈ ಕಾರ್ಯಕ್ರಮ ಕೇಳಿದ ಮೇಲೆ , ನಿಮ್ಮ ಮಕ್ಕಳೂ "ಅಮ್ಮಾ , ನಾನೂ ಕಥೆ ಹೇಳ್ತೇನೆ " ಅಂತ ಹೇಳಬಹುದು .  ನಿಮ್ಮೆಲ್ಲ ಬೆಂಬಲಕ್ಕಾಗಿ ಧನ್ಯವಾದಗಳು  . 
Ep85 - ವಿಶೇಷ - ಮಕ್ಕಳಿಗಾಗಿ ಡಾ . ರಾಜ್ ಕುಮಾರ್
ಕಳೆದ  ಶುಕ್ರವಾರ , ಏಪ್ರಿಲ್ ೨೪ , ಡಾ ರಾಜ್ ಕುಮಾರ್ ಅವರ  ಹುಟ್ಟುಹಬ್ಬ . ಸದಭಿರುಚಿಯ ಚಲನಚಿತ್ರಗಳ ಮೂಲಕ ಅಷ್ಟೇ  ಅಲ್ಲ , ಕನ್ನಡಿಗರ ದನಿಯಾಗಿ , ಮಾನವತಾವಾದಿಯಾಗಿ ರಾಜ್ ಕುಮಾರ್ ಕನ್ನಡಿಗರಿಗೆ ಚಿರಪರಿಚಯ .   1990 ರಿಂದ ಮುಂಚೆ ಹುಟ್ಟಿದ ಕನ್ನಡಿಗರಿಗೆ ರಾಜ್ ಕುಮಾರ್ ಪರಿಚಯವೇ ಬೇಡ . ಆದರೆ , ಮಕ್ಕಳಿಗೆ ರಾಜಕುಮಾರ್ ಅವರ ಪರಿಚಯ ಮಾಡುವ ಪ್ರಯತ್ನ ಆದಂತಿಲ್ಲ .   ರಾಜಕುಮಾರ್  ಹುಟ್ಟುಹಬ್ಬದ  ನೆನಪಿನಲ್ಲಿ , " ಮಕ್ಕಳಿಗಾಗಿ ಡಾ  ರಾಜಕುಮಾರ್  "  , ಅವರ ವ್ಯಕ್ತಿತ್ವದ ಕಿರು ಪರಿಚಯ , ಪುಟ್ಟ ಮಕ್ಕಳಿಗಾಗಿ .    
Ep84 - ಭಗೀರಥ ಪ್ರಯತ್ನ
ಭಾರತೀಯ  ಸಂಸ್ಕೃತಿಯಲ್ಲಿ ಪ್ರತಿ ಜೀವಿ , ವಸ್ತುವಿಗೂ ಒಂದು  ಸ್ವಾರಸ್ಯಕರ  ಕತೆಯುಂಟು . ಕಾಡಿನಲ್ಲಿ ಬಿದ್ದಿರುವ ಬಳ್ಳಿಗೊಂದು  ಕತೆ , ದೂರದಲ್ಲಿ  ಕಾಣುವ ಬಂಡೆಗೂ ಒಂದು  ಕತೆ .  ಇಷ್ಟಿದ್ದಾಗ , ಭಾರತದ ಪವಿತ್ರ ನದಿ ಗಂಗೆಗೂ ಒಂದು  ಕತೆ  ಇರಲೇ  ಬೇಕಲ್ವೆ ?   
Ep83 - ಭೀಮ ಹಾಗೂ ಹನುಮಂತ
ಮಹಾಭಾರತದಲ್ಲಿ ಬರುವ ಅಪೂರ್ವ ಪಾತ್ರ ಹನುಮಂತ .  ಹನುಮಂತ ಹಾಗೂ  ಭೀಮ ಪರಸ್ಪರ ಭೇಟಿಯಾಗಿ , ಹನುಮಂತ ಭೀಮನ  ಜತೆ ಕುಚೇಷ್ಟೆ ಮಾಡುವ  ಕತೆ  ಓದುವುದಕಷ್ಟೇ ಅಲ್ಲ , ಕೇಳುವುದಕ್ಕೂ ಬಹಳ  ಚಂದ .   
Ep82 - ವಿಷ್ಣುವಿನ ಇತರ  ಅವತಾರಗಳು
ದಶಾವತಾರ ಸರಣಿಯನ್ನು  ಮಾಡ ಹೊರಟಾಗ , ವಿಷ್ಣುವಿನ  ಹತ್ತು  ಅವತಾರಗಳಷ್ಟೇ ಅಂತ  ಅಂದು  ಕೊಂಡಿದ್ದೆವು . ಪ್ರತಿ  ಅವತಾರದ  ಕತೆ  ಬರೆಯುತ್ತಾ  ಹೋದಾಗ , ತಿಳಿದದ್ದು ವೇದ , ಪುರಾಣಗಳಲ್ಲಿ , ವಿಷ್ಣುವಿನ 35ಕ್ಕೂ  ಅವತಾರಗಳಿವೆ  ಅಂತ .  "ದಶಾವತಾರ " ಸರಣಿಯ ಕೊನೆಯ ಕಂತಿನಲ್ಲಿ , ಇತರ  ಕೆಲವು  ಅವತಾರಗಳ  ಕಿರು  ಪರಿಚಯ.          
Ep81 - ಗೌತಮ ಬುದ್ಧ
ದಶಾವತಾರದ ಸುಮಾರು ಅವತರಣಿಕೆ ( versions) ಗಳಲ್ಲಿ ಬುದ್ಧ ಹತ್ತು  ಅವತಾರಗಳಲ್ಲಿ  ಒಂದು ಪರಿಗಣಿಸುತ್ತಾರೆ .   ಈ ಕಂತಿನಲ್ಲಿ ಗೌತಮ  ಬುದ್ಧನ  ಕಿರು  ಪರಿಚಯ ಹಾಗೂ ಬುದ್ಧ  ಹುಡುಗನಾಗಿದ್ದ ಸಮಯದ  ಒಂದು  ಪುಟ್ಟ  ಕತೆಯನ್ನು ಹೇಳಲಾಗಿದೆ.    Photo Courtesy - Pari's Photography
Ep80 - Special Episode - ಏನಿದು ಕೊರೊನ ವೈರಸ್
A special episode about the mysterious Corona Virus ( COVID19) featuring Dr. Prakash and Dr. Sumana Kabbur , where we answer some questions sent by our young listeners.  ಕೊರೊನ ವೈರಸ್ ಬಗ್ಗೆ ನಮ್ಮ ಪುಟಾಣಿ  ಕೇಳುಗರು  ಕಳಿಸಿದ ಪ್ರಶ್ನೆಗಳಿಗೆ  ಈ ಕಂತಿನಲ್ಲಿ  ಡಾ . ಪ್ರಕಾಶ್  ಹಾಗೂ ಡಾ . ಸುಮನಾ ಕಬ್ಬೂರ್ ಅವರು  ಉತ್ತರಿಸಿದ್ದಾರೆ .  ಮನೆಯೊಳಗೆ ಪಾಲಿಸಬಹುದಾದ ಮಾದರಿ  ವೇಳಾಪಟ್ಟಿ  ಇಲ್ಲಿದೆ .    To learn more about the amazing job TrainAndHelp Babies is doing to increase newborn survival rate , visit https://www.trainandhelpbabies.com/.   
Ep79 - ಕೃಷ್ಣಾವತಾರ
" ದಶಾವತಾರ " ಸರಣಿಯ  ಎಂಟನೆಯ  ಅವತಾರ  ಶ್ರೀ  ಕೃಷ್ಣನ  ಅವತಾರ . ರಾಮ, ಕೃಷ್ಣರ ಕತೆಗಳು  ಪ್ರತಿಯೊಬ್ಬರಿಗೂ ಚಿರ ಪರಿಚಿತ .  ಕೃಷ್ಣನ  ಜೀವನ  ಚರಿತ್ರೆಯನ್ನು  ಸರಳವಾಗಿ , ಚೊಕ್ಕವಾಗಿ ಈ ಕತೆಯಲ್ಲಿ  ಮುಂದಿಡಲಾಗಿದೆ .   
Ep78 - ರಾಮನ  ಅವತಾರ
" ದಶಾವತಾರ " ಸರಣಿಯ ಏಳನೇ ಕಂತು ರಾಮನ ಅವತಾರ .  ರಾಮಾಯಣ , ಮನೆ  ಮನೆಯ  ದಿನ  ಜೀವನದಲ್ಲಿ  ಹಾಸು  ಹೊಕ್ಕಾಗಿರುವ  ಮಹಾ  ಕಾವ್ಯ . ದೇವರ ಮನೆಯ  ಪೂಜೆಯಿಂದ  ಹಿಡಿದು , ಕುಳಿತಾಗೊಂದು ಸಲ "ರಾಮ ರಾಮ " ಅನ್ನುವ  ಅಜ್ಜಿಯರ ತನಕ , ರಾಮ ಸೀತೆಯರು ನಮ್ಮ  ಜೀವನದ ಭಾಗವಾಗಿ  ಬಿಟ್ಟಿದ್ದಾರೆ . ! ಅಷ್ಟು ದೊಡ್ಡ  ಕತೆಯನ್ನು  8 ನಿಮಿಷದಲ್ಲಿ ಸರಳವಾಗಿ ಹೇಳುವ ಪುಟ್ಟ  ಪ್ರಯತ್ನ  ಈ ಕತೆ .     
Ep77 - ಪರಶುರಾಮ ಅವತಾರ
" ದಶಾವತಾರ " ಸರಣಿಯಲ್ಲಿ  ಆರನೆಯ  ಅವತಾರ ಪರಶುರಾಮನ ಅವತಾರ .  ಪರಶುರಾಮ ಅತಿ  ಪರಾಕ್ರಮಿ . ಬ್ರಾಹ್ಮಣನಾಗಿದ್ದೂ , ಕ್ಷತ್ರಿಯರಿಗೆ ಸಿಂಹ ಸ್ವಪ್ನನಾಗಿದ್ದ. ಪರಶುರಾಮನ ಬಗ್ಗೆ  ಸಾಮಾನ್ಯವಾಗಿ ಸಿಗುವ ಕತೆಗಳು ಮಕ್ಕಳಿಗೆ  ಸ್ವಲ್ಪ ಹೆಚ್ಚೇ  ಹಿಂಸೆ ಅನ್ನಿಸಬಹುದು  ಎಂದು , ಪರಶುರಾಮ ಮತ್ತು  ಗಣೇಶನನ್ನು  ಒಳಗೊಂಡ ಅಪರೂಪದ ಒಂದೆರಡು ಕಥೆಗಳನ್ನು  ಸೇರಿಸಿದ್ದೇವೆ . ಕಥೆ  ಕೇಳಿ , ನಿಮ್ಮ  ಅಭಿಪ್ರಾಯ , ಅನಿಸಿಕೆಗಳನ್ನು kelirondu@gmail.com ಗೆ  ಕಳಿಸಿ .   
Ep76-ವಾಮನವತಾರ
"ದಶಾವತಾರ " ಸರಣಿಯಲ್ಲಿ ೫ನೇ  ಅವತಾರ  ವಿಷ್ಣು ಕುಳ್ಳ ಬ್ರಾಹ್ಮಣನ  ಅವತಾರದಲ್ಲಿ  ಬಂದು  ಮಹಾ  ದಾನವಂತ  ಅನ್ನೋ  ಅಹಂಕಾರ ದಿಂದ  ಬೀಗುತ್ತಿದ್ದ  ರಾಕ್ಷಸ  ರಾಜ ಬಲಿ ಚಕ್ರವರ್ತಿಯ ಅಹಂಕಾರ  ಮುರಿಯುತ್ತಾನೆ .  ತಪ್ಪಿನ  ಅರಿವಾದ  ಬಲಿ ವಿಷ್ಣುವಿನ  ಕ್ಷಮೆ  ಕೇಳುತ್ತಾನೆ .  ಅಹಂಕಾರ  ಸಲ್ಲದು ಹಾಗೂ ನಾವು  ಎಷ್ಟೇ  ದೊಡ್ಡವರಿದ್ದರೂ ತಪ್ಪಾದ  ಕೂಡಲೇ ಒಪ್ಪಿಕೊಳ್ಳುವ  ದೊಡ್ಡ  ಗುಣ  ಇರಬೇಕು  ಅನ್ನುವ  ನೀತಿ  ಸಾರುವ  ಈ  ಕತೆ ದಶಾವತಾರದ  ಕತೆಗಳಲ್ಲಿ  ವಿಶಿಷ್ಟವಾದದ್ದು .    
Ep75 - ನರಸಿಂಹಾವತಾರ
" ದಶಾವತಾರ " ಸರಣಿಯಲ್ಲಿನಾಲ್ಕನೇ  ಅವತಾರ  ನರಸಿಂಹಾವತಾರ ಹಿರಣ್ಯಕಶಿಪುವಿನ  ಮಗ  ಪ್ರಹ್ಲಾದ , ವಿಷ್ಣುವಿನ  ಮಹಾ  ಭಕ್ತ . ಹಿರಣ್ಯಕಶಿಪು ಎಲ್ಲ  ಕಡೆ  ತನ್ನನ್ನೇ  ಪೂಜೆ  ಮಾಡಬೇಕು ಅಂತ  ದೇವತೆಗಳನ್ನು , ದೇವರ  ಭಕ್ತರನ್ನು  ಶಿಕ್ಷೆಗೆ ಗುರಿ  ಮಾಡಿದಾಗ ವಿಷ್ಣು ಅರ್ಧ ಸಿಂಹ , ಅರ್ಧ  ಮನುಷ್ಯನ  ಅವತಾರದಲ್ಲಿ  ಬಂದು ರಾಕ್ಷಸನಾದ  ಹಿರಣ್ಯಕಶಿಪುವನ್ನ  ಸಂಹಾರ  ಮಾಡುತ್ತಾನೆ .  
Ep74 - ವರಾಹಾವತಾರ
" ದಶಾವತಾರ " ಸರಣಿಯಲ್ಲಿ ಮೂರನೇ ಅವತಾರ  ವರಾಹಾವತಾರ .  ವರಾಹ  ಅಂದರೆ   ಕಾಡು ಹಂದಿ  ಎಂದರ್ಥ . ಇಂಗ್ಲಿಷ್ನಲ್ಲಿ  wild boar ಅಂತಲೂ  ಕರೆಯುತ್ತಾರೆ .  ವೈಕುಂಠದ  ದ್ವಾರ  ಪಾಲಕರಾದ ಜಯ  - ವಿಜಯರು  ಭೂಮಿಯ  ಮೇಲೆ  ಹಿರಣ್ಯಾಕ್ಷ  ಹಾಗೂ  ಹಿರಣ್ಯಕಶಿಪು   ಎಂಬ  ರಾಕ್ಷಸರಾಗಿ ಹುಟ್ಟುತ್ತಾರೆ . ಬ್ರಹ್ಮನ ವಿಚಿತ್ರ  ವರದಿಂದ ಹಿರಣ್ಯಾಕ್ಷ  ಸಾವೇ  ಬರದಿರುವಷ್ಟು  ಬಲಶಾಲಿ ಆಗಿ ಸಿಕ್ಕಿದ್ದಾನು  ದ್ವಂಸ  ಮಾಡಿ  ಭೂಮಿ  ದೇವತೆಯನ್ನು  ಪಾತಾಳಕ್ಕೆ ಕರೆದು  ಹೋಗಿಬಿಡುತ್ತಾನೆ .   ವಿಷ್ಣು ವರಾಹ  ಅವತಾರ  ಧರಿಸಿ  ಭೂಮಿ  ದೇವತೆಯನ್ನ  ಬಿಡಿಸುತ್ತಾನೆ .   
Ep73 - ಕೂರ್ಮಾವತಾರ
" ದಶಾವತಾರ " ಸರಣಿಯಲ್ಲಿ ಎರಡನೇ  ಅವತಾರ  ಕೂರ್ಮಾವತಾರ .  ಕೂರ್ಮ ಅಥವಾ  ಆಮೆ ಭೂಮಿಯನ್ನು ಬೀಳದಂತೆ ಹಿಡಿದಿದೆ ಎಂಬ  ನಂಬಿಕೆ ಹಿಂದೂ , ಬೌದ್ಧ , ಚೀನೀ , ಅಮೆರಿಕಾದ ಇಂಡಿಯನ್ ಸಂಸ್ಕೃತಿಗಳಲ್ಲಿ ಪ್ರಚಲಿತ .    ದೇವತೆಗಳಿಗೆ  ಸಾವಿಲ್ಲದಂತೆ ಮಾಡುವ  "ಅಮೃತ " ಪಡೆಯೋಕೆ   ರಾಕ್ಷಸರು , ದೇವತೆಗಳಿಬ್ಬರೂ  ಸಮುದ್ರ  ಮಂಥನಕ್ಕೆ ನಿಂತಾಗ , ವಿಷ್ಣು  ಕೂರ್ಮ ಅಥವಾ  ಆಮೆಯ  ರೂಪದಲ್ಲಿ ಬಂದು  ದೇವತೆಗಳಿಗೆ  ಅಮೃತ ಸಿಗುವ  ಹಾಗೆ  ಮಾಡುತ್ತಾನೆ .      
Ep72 - ಮತ್ಸ್ಯಾವತಾರೆ
ಭಾರತೀಯ ಸಂಸ್ಕೃತಿಯ  ಮಹಾನ್ ಅಸ್ತಿ ನಮ್ಮ ವೇದ-ಪುರಾಣಗಳು .  ಅದರಲ್ಲೂ ವಿಷ್ಣುವಿನ ದಶಾವತಾರಗಳು ಕೆಟ್ಟದ್ದನ್ನು ಕೆಡವಿ  ಒಳ್ಳೆಯದು ಒಂದಲ್ಲ ಒಂದು ರೂಪದಲ್ಲಿ ಬಂದೆ ಬರುತ್ತದೆ ಎನ್ನುವ  ನಂಬಿಕೆಗೆ ಇಂಬು ಕೊಡುತ್ತವೆ .   ಮುಂದಿನ  ಕೆಲವು ವಾರದಲ್ಲಿ , ಈ ದಶಾವತಾರದ  ಕತೆಗಳನ್ನು ಮಕ್ಕಳಿಗೆ ಸುಲಭವಾಗಿ ಅರ್ಥವಾಗುವ  ರೀತಿಯಲ್ಲಿ ತರುವ ಪ್ರಯತ್ನ ನಮ್ಮ ತಂಡ ಮಾಡುತ್ತಿದೆ .  ದಶಾವತಾರದ  ಮೊದಲನೇ ಅವತಾರವೇ  ಮತ್ಸ್ಯಾವತಾರ . ಮನುಷ್ಯ  ಪೀಳಿಗೆಯ ಜ್ಞಾನವೆಲ್ಲವೂ ಅಡಗಿದ್ದ  ವೇದಗಳನ್ನೇ ಕದಿಯಲು ಹೊರಟಿದ್ದ ಹಯಗ್ರೀವನೆಂಬ  ರಾಕ್ಷಸನಿಗೆ ಬುದ್ದಿ ಕಲಿಸಲು ವಿಷ್ಣು ಮೀನಿನ ವೇಷದಲ್ಲಿ ಬಂದ ಎಂದು  ಮತ್ಸ್ಯಪುರಾಣ ಹೇಳುತ್ತದೆ .      ಮೂಲ:  ಅಮರ ಚಿತ್ರಕಥಾ ಪುಸ್ತಕಗಳು    ಉಚಿತವಾಗಿ  ಕಥೆಗಳನ್ನು ಕೇಳಲು ಮಿಂದಾಣ - http://kelirondukatheya.org  Subscribe : https://podcasts.google.com/?feed=aHR0cDovL2tlbGlyb25kdWthdGhleWEub3JnL3Jzcw ಹೊಸ  ಕಥೆಗಳಿಗೆ Whatsapp ಗುಂಪಿಗೂ  ಸೇರಬಹುದು: https://chat.whatsapp.com/GsWybXllVFC6INaXFcNSnQ  Background :  Mesmerize by Kevin MacLeod is licensed under a Creative Commons Attribution license (https://creativecommons.org/licenses/by/4.0/) Source: http://incompetech.com/music/royalty-free/index.html?isrc=USUAN1500005 Artist: http://incompetech.com/  
Ep 71 - [ವಿಶೇಷ  ಕಾರ್ಯಕ್ರಮ ] - ಮಕ್ಕಳ  ಕಲ್ಪನಾಶಕ್ತಿ
ಮಕ್ಕಳ ಕಲ್ಪನಾಶಕ್ತಿ ಯನ್ನು ಕೆರಳಿಸಲು 20 ಮೋಜಿನ ಪ್ರಶ್ನೆಗಳು ಮಕ್ಕಳನ್ನು  ಮಾತಾಡಿಸುವಾಗ , ಯಾವ  ಶಾಲೆಗೇ ಹೋಗುತ್ತೀ , ಎಷ್ಟು  ಮಾರ್ಕ್ಸ್ ತಗೊಂಡಿದ್ದೀ ಅಂತಹ ಪ್ರಶ್ನೆಗಳು  ಸರ್ವೇ ಸಾಮಾನ್ಯ . ಮುಂದಿನ ಸಲ ಮಕ್ಕಳ ಜತೆ  ಮಾತಾಡೋ ಅವಕಾಶ ಸಿಕ್ಕಾಗ ಈ ಕೆಳಗಿನ ಪ್ರಶ್ನೆಗಳನ್ನು ಕೇಳೋಕೆ  ಪ್ರಯತ್ನ ಮಾಡಿ . ಅವರ ಉತ್ತರಗಳು ಅವರ ಯೋಚನಾ ಲಹರಿ , ವ್ಯಕ್ತಿತ್ವ್ , , ಕುತೂಹಲ, ಆಸಕ್ತಿಗಳನ್ನೂ ಕೂಡ ಬಿಚ್ಚಿಡುತ್ತವೆ. ಎಲ್ಲಕ್ಕಿಂತ  ಹೆಚ್ಚಾಗಿ , ಪ್ರತಿಯೊಂದು ಮಗುವಿನೊಳಗಿರುವ ವಿಶೇಷತೆಯನ್ನ ಹೊರಗೆ ತರುತ್ತವೆ .  ನಿಮ್ಮ  ಅನುಭವವನ್ನು   ನಮ್ಮೊಡನೆ ಹಂಚಿಕೊಳ್ಳೋಕೆ  ಮರೆಯಬೇಡಿ !  ಇನ್ನೂ  ಕೆಲವು  ಪ್ರಶ್ನೆಗಳು  ! ೧. ನಿನಗೆ  ಕನಸು ಕಾಣೋದು  ಅಂದ್ರೆ ಇಷ್ಟಾನ ?  ನಿನ್ನ ಅಚ್ಚುಮೆಚ್ಚಿನ ಕನಸು ಯಾವುದು ? ೨. ನಿನಗೆ ಯಾವ ಕೆಲಸಗಳು ಮಾಡಿದ್ರೆ ಖುಷಿ ಆಗುತ್ತೆ ?  ೩. ನಿನ್ನ ಗೆಳೆಯರು ಹೇಗಿದ್ದಾರೆ ?  ಅವರಿಗೆ ಏನು ಮಾಡೋಕೆ ಇಷ್ಟ ? ೪. ಈ ಸದ್ಯ ನಿನಗೆ ಏನು ಬೇಕಾದ್ರೂ ಸಿಗೋದಾದ್ರೆ, ಏನು ಪಡೆಯಲಿ  ಇಷ್ಟ ? ಅದರಿಂದ  ಏನ್ಮಾಡ್ತಿಯಾ  ? ೫. ನಿನ್ನ ಅಚ್ಚು ಮೆಚ್ಚಿನ ಕಾರ್ಟೂನ್ ಯಾವುದು ? ಅದರಲ್ಲಿ  ಯಾವ ಪಾತ್ರ  ನಿನಗೆ  ತುಂಬಾ  ಇಷ್ಟ  ? ಯಾಕೆ  ಇಷ್ಟ  ?  ೬. ನೀನು ಹೊಸ ಉದ್ಯಮ / ಅಂಗಡಿ ಶುರು ಮಾಡೋದಾದ್ರ್ ಯಾವ ಥರ ಉದ್ಯಮ / ಅಂಗಡಿ ಶುರು ಮಾಡ್ತೀಯ ?  ೭. ನಿನಗೆ ಸೂಪರ್ ಮ್ಯಾನ್, ಸ್ಪೈಡೆರ್ ಮ್ಯಾನ್ ಥರ ಸೂಪರ್ ಹೀರೊ ನಿಮಗೆ ಇಷ್ಟಾನ ? ಹಾಗಾದರೇ,  ನೀನು ಸೂಪರ್ ಹೀರೊ ಆಗಿದ್ರೆ, ನೀನು ಯಾವ ಹೆಸರಿಟ್ಟು ಕೊಳ್ತಿದ್ದೆ ? ನಿನಗೆ ಯಾವೆಲ್ಲ  ವಿಶೇಷ ಶಕ್ತಿಗಳು ಬೇಕು? ೮. ನೀನು ಸಮುದ್ರಕ್ಕೆ ಹೋದೆ ಅಂತ ತಿಳಿದುಕೋ . ಎಲ್ಲದ್ದಕ್ಕಿಂತ ಮೊದಲು ಯಾವ ಆಟ ಆಡೋಕೆ ನಿನಗಿಷ್ಟ ? ೯. ನಿನಗೆ ಮನೆಯಲ್ಲಿ ಯಾವ ಗಿಡ ಬೆಳೆಸಲಿಕ್ಕೆ ಇಷ್ಟ ? ೧೦. .ನಿನ್ಹತ್ತಿರ ಆಟ ಸಾಮಾನುಗಳಿದ್ಯಲ್ಲ , ಅವು ಮಾತಾಡುವಂತಿದ್ದರೆ ಹೇಗಿರ್ತಿತ್ತು ? ಅವು  ಏನು  ಮಾತಾಡ್ತಿದ್ದವು ? ೧೧. ನಿನ್ಹತ್ತ್ರ ಬೇರೆಯವರಿಗೆ ಸಹಾಯ ಮಾಡೋಕೆ 1000 ರೂಪಾಯಿ ,ಇದ್ರೆ, ಯಾರಿಗೆ / ಏನು / ಯಾವ  ಸಹಾಯ ಮಾಡ್ತೀ ? ೧೨. ನೀನೆ  ಒಂದು ಪುಸ್ತಕ  ಬರೆದೆ ಅಂತ ಇಟ್ಕೋ .  ಯಾವುದರ ಬಗ್ಗೆ ಪುಸ್ತಕ  ಬರೀತಿಯ ? ೧೩. ನಿನಗೆ  ಯಾವ ಥರದ  ತಿಂಡಿ ಇಷ್ಟ  ? ನೀನು ನಿನ್ನದೇ  ಹೋಟೆಲ್ ಒಂದು ತೆಗೆದಿದ್ದರೆ , ಏನೇನೊ  ತಿಂಡಿ ಮಾಡ್ತಿಯಾ  ನಿನ್ನ ಹೋಟೆಲ್ ನಲ್ಲಿ . ? ೧೪. ನಿನ್ಹತ್ರ  ಒಂದು ಇಡೀ ದಿವಸ  ತುಂಬಾ ಚೆನ್ನಾಗಿರೋ  ಕ್ಯಾಮೆರಾ ಇದ್ರೆ , ಯಾವ / ಯಾರ  ಫೋಟೋ ತೆಗೆಯುತ್ತಿ ೧೫. ನೀನು  ವಿಜ್ಞಾನಿ  ಆಗಿ ಏನಾದ್ರೂ  ಕಂಡು ಹಿಡಿಯಬೇಕು  ಅಂತ ಯೋಚಿಸಿದ್ಯಾ ? ಹಾಗಿದ್ದರೆ , ಏನು  ಕಂಡು ಹಿಡಿಯೋದಕ್ಕೆ ಇಷ್ಟ  ?  ೧೬. ನಿನಗೆ  ಶಾಲೆ ಗೆ  ಹೋಗಬೇಕಾದ್ದೇ  ಇಲ್ಲ ಅಂತ ಅಂದು  ಕೊಳ್ಳೋಣ . ಆಗ ನೀನು  ಏನು ಮಾಡುತ್ತೀ ? ೧೭. ನೀನು , ಶಿಕ್ಷಕ , ಅಥವಾ  ಟೀಚರ್ ಆಗಿದ್ದೆ ಅಂದುಕೊಳ್ಳೋಣ . ಆಗ  ಮಕ್ಕಳಿಗೆ , ಏನು ಕಲಿಸಲಿಕ್ಕೆ ಇಷ್ಟ ನಿನಗೆ  ? ೧೮. ನಿನಗೆ  ಯಾವ ಕಥೆ  ಪುಸ್ತಕ ಇಷ್ಟ  ? ಯಾವ ಪಾತ್ರ ಇಷ್ಟ ? ೧೯. ನಿನ್ನ ಬಗ್ಗೆ ಯಾರಿಗೂ ಗೊತ್ತಿಲ್ದೆ ಇರೋ ವಿಷ್ಯ ಏನಾದ್ರೂ ನನಗೆ ಹೇಳ್ತಿಯ ?
Ep70 - ಎಮ್ಮೆಯೋ  ಮೇಕೆಯೋ  ?
ಈ ಕತೆ ಇಂಡೋನೇಷ್ಯಾ ದೇಶದ ಜಾನಪದ ಕತೆಗಳಿಂದ ಆಯ್ದುಕೊಂಡಿದ್ದು .  ಕಳೆದ ಸಲದ “ಸೋಮಾರಿ ಸಿದ್ದ “ ನ ಹಾಗೆ , ಇನ್ನೂಬ್ಬ ಮುಗ್ದ ಮನುಷ್ಯನೊಬ್ಬನ  ಕತೆ . ಮನೆಯಲ್ಲಿ ಕಷ್ಟ ಅಂತ ಇದ್ದೊಂದು ಎಮ್ಮೆಯನ್ನ ಮಾರಿ ಬನ್ನಿ ಅಂತ ಅವನ  ಹೆಂಡತಿ ಕಳಿಸಿದರೆ , ಎಷ್ಟೆಲ್ಲಾ ಅವಾಂತರ ಮಾಡಿಕೊಂಡು ಬಂದ , ಮತ್ತು ಕೊನೆಯಲ್ಲಿ ಆಗಿದ್ದ  ಮೋಸದಿಂದ ಹೇಗೆ ತಪ್ಪಿಸಿಕೊಂಡ ಅನ್ನೋ ಮೋಜಿನ ಕತೆ ಕೇಳೋಣ .  
Ep69 - ಸೋಮಾರಿ ಸಿದ್ದ
ದಿನವಿಡೀ ನಿದ್ದೆ ಮಾಡುತ್ತಾ ಕಾಲ  ಕಳೆಯುತ್ತಿದ್ದ ಸಿದ್ದ ರಾತ್ರೋ ರಾತ್ರಿ ಪ್ರಖ್ಯಾತ ಮಂತ್ರವಾದಿ ಅನ್ನಿಸಿಕೊಂಡು ಬಿಟ್ಟ .  ! ತಿಳಿ ಹಾಸ್ಯದಿಂದ ಕೂಡಿದ ಈ ಕತೆ ನಿಮ್ಮನ್ನು ಹಾಗೂ ಮಕ್ಕಳನ್ನು ನಕ್ಕು ನಗಿಸುವುದು ಖಂಡಿತ .  ಹಾಗೆ , ಕಥೆಯ ಕೊನೆಯಲ್ಲಿ  ಕೇಳಿದ "ಜ್ಞಾನ - ವಿಜ್ಞಾನ - ವಿಸ್ಮಯ " ಅಂಕಣದಲ್ಲಿ ಕೇಳಿದ ಪ್ರಶ್ನೆಗಳಿಗೆ ಉತ್ತರ ಕಂಡುಹಿಡಿದು ಕಳಿಸೋದನ್ನ  ಮರೆಯಬೇಡಿ !