add_circle Create Playlist
ಕೇಳಿರೊಂದು ಕಥೆಯ - Raaga.com - A World of Music

ಕೇಳಿರೊಂದು ಕಥೆಯ

Kelirondu Katheya

Description

ಮಕ್ಕಳ ಆಡಿಯೋ ಕಥೆಗಳು
102 Episodes Play All Episodes
Ep111+-+%E0%B2%B8%E0%B3%82%E0%B2%B0%E0%B3%8D%E0%B2%AF%2C+%E0%B2%9A%E0%B2%82%E0%B2%A6%E0%B3%8D%E0%B2%B0%2C+%E0%B2%AE%E0%B2%A4%E0%B3%8D%E0%B2%A4%E0%B3%81+%E0%B2%B8%E0%B2%AE%E0%B3%81%E0%B2%A6%E0%B3%8D%E0%B2%B0%E0%B2%97%E0%B2%B3+%E0%B2%95%E0%B2%A4%E0%B3%86
access_time3 days ago
ಸೂರ್ಯ ಚಂದ್ರರು ಒಂದು  ಕಾಲದಲ್ಲಿ  ನಮ್ಮ  ನಿಮ್ಮ  ಥರ  ಭೂಮಿಯ ಮೇಲೆ ಇದ್ರಂತೆ . ! . ಆಶ್ಚರ್ಯ ಆಗುತ್ತಲ್ಲಾ ?  ಹೌದು , ಸೂರ್ಯ ಚಂದ್ರರು ಮನುಷ್ಯರ ಥರ  ಮನೆಯಲ್ಲಿ  ಇರ್ತಿದ್ರು ಅಂತ  ಆಫ್ರಿಕನ್ನರು  ನಂಬುತ್ತಾರಂತೆ . 
ಹಾಗಾದ್ರೆ , ಈಗ್ಯಾಕೆ ಆಕಾಶದಲ್ಲಿ  ಇರ್ತಾರೆ ? ತಿಳಿಯೋಕೆ , ಈ ಕತೆ  ಕೇಳಿ . 
Ep110+-+%E0%B2%B8%E0%B2%BF%E0%B2%A1%E0%B3%81%E0%B2%95+%E0%B2%B8%E0%B2%BF%E0%B2%A6%E0%B3%8D%E0%B2%A6+%E0%B2%B9%E0%B2%BE%E0%B2%97%E0%B3%82+%E0%B2%97%E0%B3%81%E0%B2%B9%E0%B3%86%E0%B2%AF+%E0%B2%AE%E0%B2%A8%E0%B3%81%E0%B2%B7%E0%B3%8D%E0%B2%AF
access_time17 days ago
ಸಿಡುಕ ಸಿದ್ದನಿಗೆ ಸಿಟ್ಟು ಎಷ್ಟು ಜಾಸ್ತಿಯೋ ಪೆದ್ದುತನ ಸ್ವಲ್ಪ ಅದಕ್ಕಿಂತ ಜಾಸ್ತಿ.  ಈ ಕತೆಯಲ್ಲಿ ಸಿದ್ಧನಿಗೆ ಗುಹೆಯ ಮನುಷ್ಯನಿಂದ ಊಹಿಸಲಾರದಷ್ಟು ಐಶ್ವರ್ಯ ಸಿಕ್ಕರೂ, ಪಾಪ ಅದನ್ನು ಉಳಿಸಿಕೊಳ್ಳೋಲಾಗಲಿಲ್ಲ. ಹೇಗೆ, ಯಾಕೆ ಅನ್ನುವುದನ್ನು ಕತೆಯಲ್ಲಿ ಕೇಳೋಣ.
 
ನಮಗೆ ಎಷ್ಟು ಅನುಭವ ಇದೆಯೋ ಅಷ್ಟೇ ದಕ್ಕುವುದು ಅನ್ನುವುದಕ್ಕೆ ಈ ಕತೆ ಉತ್ತಮ ಉದಾಹರಣೆ.
Repeat+-+%E0%B2%AA%E0%B2%BE%E0%B2%A4%E0%B3%8D%E0%B2%B0%E0%B3%86+%E0%B2%AE%E0%B2%B0%E0%B2%BF+%E0%B2%87%E0%B2%9F%E0%B3%8D%E0%B2%9F+%E0%B2%95%E0%B2%A4%E0%B3%86
access_time1 month ago
ಕೇಳಿರೊಂದು  ಕಥೆಯ  ಸರಣಿಯ  ಕತೆಗಳಲ್ಲಿ  ನಾಸ್ರುದ್ದೀನ್  ಹೊಡ್ಜಾನ ಕತೆಗಳು ಅತಿ  ಜನಪ್ರಿಯ.  2019 ರಲ್ಲಿ ಪ್ರಕಟವಾಗಿದ್ದ  ಈ ಕತೆಯ ಮರು  ಪ್ರಸಾರ . 
ನಾಸ್ರುದ್ದೀನ್ ಹೊಡ್ಜ ಪಕ್ಕದ ಮನೆಯವನ ಹತ್ತಿರ ಪಾತ್ರೆ ಸಾಲ ಪಡೆದು ವಾಪಸ್ ಕೊಡುವಾಗ ಪಾತ್ರೆ ಅಷ್ಟೇ ಅಲ್ದೆ ಅದರ 'ಮರಿ ' ಯನ್ನೂ ಹೇಗೆ ಕೊಡಲು ಸಾಧ್ಯ ? ಪಾತ್ರೆ ಎಲ್ಲಾದ್ರೂ ಮರಿ ಇಡುತ್ಯೆ ? ಆದರೆ ' ಕೊಟ್ಟೋನು ಕೋಡಂಗಿ! ಇಸ್ಕೊಂಡೋನು ಈರಭದ್ರ " ಅನ್ನೋ ಗಾದೆಯ ಹಾಗೆ , ಆ ಪಕ್ಕದ ಮನೆಯವನಿಗಾದ್ರೂ ಗೊತ್ತಾಗಬೇಡವೇ  ? 
ಹೊಡ್ಜ ಯಾಕೆ ಹೀಗೆ ಮಾಡಿದ , ಮುಂದೇನಾಯ್ತು ಅನ್ನೋದನ್ನು ಈ ಕತೆಯಲ್ಲಿ ಕೇಳಿ  . 
 
Ep109+-+%E0%B2%B9%E0%B2%B8%E0%B3%81+%E0%B2%AE%E0%B2%A4%E0%B3%8D%E0%B2%A4%E0%B3%81+%E0%B2%A8%E0%B3%8A%E0%B2%A3
access_time1 month ago
ಹಸುಗಳಿಗೂ ಅವುಗಳ ಸುತ್ತ ಸದಾ ಜುಯ್ ಅಂತ ಸುತ್ತುವ ನೊಣಗಳಿಗೂ ಅದೇನೋ ವಿಚಿತ್ರ ಸಂಬಂಧ . ವೈಜ್ಞಾನಿಕವಾಗಿ ನೊಣಗಳಿಂದ ಕಣ್ಣಿನ ರೋಗ  ( Pink Eye ) ಬರುವುದು ಸಹಜವಾದರೂ ,  ಆಫ್ರಿಕಾದ ಜಾನಪದ ಕತೆಗಳ ಪ್ರಕಾರ ನೊಣಗಳು ತೊಂದರೆ ಕೊಡುವುದಕ್ಕೆ ಹಸುಗಳೇ ಕಾರಣವಂತೆ .  !
 
Ep108+-+%E0%B2%AC%E0%B2%BE%E0%B2%B5%E0%B2%B2%E0%B2%BF%E0%B2%97%E0%B2%B3%E0%B3%81+%E0%B2%B0%E0%B2%BE%E0%B2%A4%E0%B3%8D%E0%B2%B0%E0%B2%BF%E0%B2%AF%E0%B2%B7%E0%B3%8D%E0%B2%9F%E0%B3%87+%E0%B2%B9%E0%B3%8A%E0%B2%B0%E0%B2%97%E0%B3%87%E0%B2%95%E0%B3%86+%E0%B2%AC%E0%B2%B0%E0%B3%81%E0%B2%A4%E0%B3%8D%E0%B2%A4%E0%B2%B5%E0%B3%86%3F
access_time2 months ago
ಬಾವಲಿ ( Bat ) ವಿಚಿತ್ರ  ಹಾಗೂ ಕುತೂಹಲಕಾರಿ ಜೀವಿ . ಅತ್ತ ಪ್ರಾಣಿಯೂ ಅಲ್ಲದೆ , ಇತ್ತ ಹಕ್ಕಿಯೂ ಅಲ್ಲದ ಬಾವಲಿ ರಾತ್ರಿ ಅಷ್ಟೇ ಹೊರ ಬರುತ್ತವೆ . 
ವೈಜ್ಞಾನಿಕವಾಗಿ ಬಾವಲಿಗಳಿಗೆ ದೃಷ್ಟಿ ಅಷ್ಟು ಬಲವಾಗಿ ವೃದ್ಧಿಯಾಗಿಲ್ಲ , ಬದಲಾಗಿ Echo location , ಅಂದರೆ ಸೂಕ್ಷ್ಮ ಧ್ವನಿ  ತರಂಗಗಳ ನೆರವಿನಿಂದ ದಾರಿ , ಊಟ  ಹುಡುಕುತ್ತವೆ  .
ನೂರಾರು ವರ್ಷಗಳ ಹಿಂದೆ ಆಫ್ರಿಕಾದ ಜನರಿಗೆ ಈ ಬಾವಲಿ ರಾತ್ರಿಯಷ್ಟೇ ಹೊರಗೇಕೆ ಬರುತ್ತದೆ ಅನ್ನುವ ಪ್ರಶ್ನೆಗೆ  ಸೊಗಸಾದ ಕತೆಯ ಮೂಲಕ ವಿವರಿಸಿದ್ದಾರೆ .  
ಕೇಳೋಣ ಬನ್ನಿ . 
 
%5B+%E0%B2%B5%E0%B2%BF%E0%B2%B6%E0%B3%87%E0%B2%B7+%5D+-+%E0%B2%A6%E0%B3%80%E0%B2%AA%E0%B2%BE%E0%B2%B5%E0%B2%B3%E0%B2%BF+%E0%B2%B9%E0%B2%AC%E0%B3%8D%E0%B2%AC
access_time2 months ago
ದೀಪಾವಳಿ ಹಬ್ಬದ ಶುಭಾಶಯಗಳು ಎಲ್ಲರಿಗೂ ಗೆಳೆಯರೇ .  
ದೀಪಾವಳಿ ಭಾರತೀಯರಿಗೆ ವಿಶೇಷ ಹಬ್ಬ . ಈ ಹಬ್ಬದ ಹಿಂದೆ ಬಹಳಷ್ಟು ಉಪಕತೆಗಳಿವೆ . 
ಈ ಕಂತಿನಲ್ಲಿ ಈ ಹಬ್ಬದ ಬಗ್ಗೆ  ಮೂರು ಕತೆಗಳನ್ನು  ಕೇಳೋಣ .
 
 
Ep107+-+%E0%B2%97%E0%B3%81%E0%B2%A1%E0%B3%81%E0%B2%97%E0%B3%81+%E0%B2%AE%E0%B2%A4%E0%B3%8D%E0%B2%A4%E0%B3%81+%E0%B2%B8%E0%B2%BF%E0%B2%A1%E0%B2%BF%E0%B2%B2%E0%B3%81
access_time3 months ago
ಗುಡುಗು , ಸಿಡಿಲು ಮಳೆಗಾಲದಲ್ಲಿ ಸರ್ವೇ ಸಾಮಾನ್ಯ .  ಗುಡುಗು ಕೇಳುವ ಮೊದಲೇ ಸಿಡಿಲು ಕಾಣುವುದೂ ಸಾಮಾನ್ಯ .  ಆದರೆ , ಸಾವಿರಾರು ವರ್ಷಗಳ ಹಿಂದೆಯೇ  ಇದನ್ನು ಮನಗಂಡು ಗುಡುಗು , ಸಿಡಿಲಿನ ಸುತ್ತ ಹೆಣೆದಿರುವ ಈ ಕತೆ ,  ಸಿಡಿಲನ್ನು ಚೂಟಿ ಟಗರಿಗೂ ,  ಗೂಡುಗನ್ನು  ಮಗನನ್ನು ಸರಿ ಹಾದಿಗೆ  ತರುವ ಅಮ್ಮನಿಗೂ  ಹೋಲಿಸುವ  ಮೂಲಕ ಕೇಳುವುದಕ್ಕೆ  ವಿಶಿಷ್ಟ  ಅನುಭವ  ಕೊಡುತ್ತದೆ .  Thunder and Lightning are common phenomena. This folktale compare lightning to a mischievous Ram and the thunder as the mom that follows her son around scolding him for his mischiefs.  A unique story. 
Ep106+-+%E0%B2%B8%E0%B3%81%E0%B2%B3%E0%B3%8D%E0%B2%B3%E0%B3%81+%E0%B2%B9%E0%B3%87%E0%B2%B3%E0%B2%A6%E0%B2%BF%E0%B2%B0%E0%B3%81%E0%B2%B5+%E0%B2%AE%E0%B2%A8%E0%B3%81%E0%B2%B7%E0%B3%8D%E0%B2%AF
access_time3 months ago
ಸುಳ್ಳು ಹೇಳುವುದು ಅಂದರೆ ಸಹಜ . ಅದರಲ್ಲೂ , ಕೆಲವರಿಗೆ ಸುಳ್ಳು ಹೇಳುವುದು ಚಟ ವಾಗಿ ಬಿಟ್ಟಿರುತ್ತದೆ . ಹಾಗಿರುವಾಗ , ಒಂದೂ ಸುಳ್ಳು ಹೇಳದೆ ಇರುವ  ಮನುಷ್ಯ  ಒಬ್ಬ  ಬದುಕಿದ್ದ  ಅಂದರೆ ಆಶ್ಚರ್ಯ  ಆಗುತ್ತೆ  ಅಲ್ವಾ ? 
ಈ ಕತೆಯಲ್ಲಿ ಆ ಮನುಷ್ಯನನ್ನ  ಭೇಟಿ ಮಾಡೋಣ . ಅವನಿಂದ ಸುಳ್ಳು ಹೇಳಿಸೋಕೆ ಪಾಡು ಪಟ್ಟ ರಾಜನ ಬಗ್ಗೆಯೂ ಕೇಳೋಣ 
Ep105+-+%E0%B2%B8%E0%B2%BF%E0%B2%82%E0%B2%B9%E0%B2%B5%E0%B2%A8%E0%B3%8D%E0%B2%A8%E0%B3%81+%E0%B2%B8%E0%B3%8B%E0%B2%B2%E0%B2%BF%E0%B2%B8%E0%B2%BF%E0%B2%A6+%E0%B2%A4%E0%B3%8B%E0%B2%B3+%28+%E0%B2%89%E0%B2%A4%E0%B3%8D%E0%B2%A4%E0%B2%B0+%E0%B2%95%E0%B2%B0%E0%B3%8D%E0%B2%A8%E0%B2%BE%E0%B2%9F%E0%B2%95+%E0%B2%B6%E0%B3%88%E0%B2%B2%E0%B2%BF%29
access_time4 months ago
ಕಳೆದ  ವಾರ ಇದೇ  ಕತೆಯ ಸರಳ  ಗನ್ನಡ  ಅವತರಣಿಕೆ ( version ) ಅನ್ನು ಮಾಡಿದ್ದೆವು . ಈ ವಾರ , ಜೈರಾಜ್ ಗಲಗಲಿ ಅವರು ಈ ಕತೆಯನ್ನು ಉತ್ತರ ಕರ್ನಾಟಕ ಶೈಲಿ ಒಳಗ ಹೇಳಿದ್ದಾರೆ . 
ನೀವೂ , ನಾವೂ ಕೇಳಿ  ಮಜಾ ತಗಳ್ಳೋಣಾಂತ ? ಏನಂತೀರಿ ? 
Ep104+-+%E0%B2%B8%E0%B2%BF%E0%B2%82%E0%B2%B9%E0%B2%B5%E0%B2%A8%E0%B3%8D%E0%B2%A8%E0%B3%81+%E0%B2%B8%E0%B3%8B%E0%B2%B2%E0%B2%BF%E0%B2%B8%E0%B2%BF%E0%B2%A6+%E0%B2%A4%E0%B3%8B%E0%B2%B3
access_time4 months ago
ಪಂಚತಂತ್ರದ ಕತೆಗಳಲ್ಲಿ ನರಿ ಬುದ್ದಿವಂತಿಕೆ  ಹಾಗೂ ಕಪಟತನಕ್ಕೆ ಹೆಸರುವಾಸಿ . ಆಫ್ರಿಕಾದ ಜಾನಪದ ಕತೆಗಳಲ್ಲಿ  ತೋಳಕ್ಕೆ ನರಿಯ ಸ್ಥಾನ .  
ಈ ಕತೆಯಲ್ಲಿ ಹಿಂದೆ ತೋಳದಿಂದ ಆದ ಮೋಸ ಮರೆಯದ ಸಿಂಹಕ್ಕೆ ತೋಳ ಮತ್ತೆ ಸಿಕ್ಕಿ  ಬೀಳುತ್ತದೆ . ತೋಳ ಸಿಂಹದಿಂದ ಪಾರು ಹೇಗೆ ಆಗುತ್ತದೆ ಅನ್ನುವುದನ್ನು ಕೇಳೋಣ . 
Ep103+-+%E0%B2%B8%E0%B3%8B%E0%B2%B0%E0%B3%86%E0%B2%95%E0%B2%BE%E0%B2%AF%E0%B2%BF+%E0%B2%AE%E0%B2%95%E0%B3%8D%E0%B2%95%E0%B2%B3%E0%B3%81%28+The+Calabash+Kids+%29
access_time4 months ago
ಆಫ್ರಿಕಾದಲ್ಲಿ  ತಮಟೆಯ ಆಕಾರದಲ್ಲಿರೋ ಸೋರೆಕಾಯಿ ಸಿಗುತ್ತದೆ . ಸೋರೆಕಾಯಿಯ ಉಪಯೋಗ ಕೂಡ  ಹತ್ತು  ಹಲವು  ರೀತಿಯಲ್ಲಿ .  ಅಡುಗೆಯಂತೂ  ಹೌದು , ಆದರೆ ಅಲ್ಲಿನ ಜನರು ಸೋರೆಕಾಯಿಯನ್ನು  ಒಣಗಿಸಿ , ತಿರುಳು ತೆಗೆದು , ಅದನ್ನು ನೀರು ತುಂಬುವ  ಬಿಂದಿಗೆಯಾಗಿ , ಸಾಮಗ್ರಿ  ತುಂಬಿಡುವ ಪಾತ್ರೆಯಾಗಿ ಉಪಯೋಗಿಸುತ್ತಾರೆ . 
ಈ ಸೋರೆಕಾಯಿಯ ಬಗ್ಗೆ ಕೂಡ ಜನಪದ ಕತೆ ಇದೆ ಅಂದರೆ ಆಶ್ಚರ್ಯ ಆಗುತ್ತೆ ಅಲ್ವೇ .  
ಈ ಕತೆಯಲ್ಲಿ , ಮಕ್ಕಳಿಲ್ಲದ ಹೆಣ್ಣು ಮಗಳಿಗೆ ಸೋರೆಕಾಯಿಯ ಬೀಜಗಳಿಂದ ಮಕ್ಕಳು ಹುಟ್ಟಿದ  ರೋಚಕ ಕತೆ ಕೇಳೋಣ . 
Ep102+-+%E0%B2%B9%E0%B2%95%E0%B3%8D%E0%B2%95%E0%B2%BF%E0%B2%97%E0%B2%B3+%E0%B2%B0%E0%B2%BE%E0%B2%9C+%E0%B2%AF%E0%B2%BE%E0%B2%B0%E0%B3%81+%3F
access_time4 months ago
ಹಕ್ಕಿಗಳಿಗೆ ಸಿಂಹ ನಂತೆ ರಾಜ ಒಬ್ಬನಿದ್ದರೆ ಹೇಗಿರ್ತಿತ್ತು ಅನ್ನುವ ಪ್ರಶ್ನೆಯನ್ನು  ಕತೆಯ ರೂಪದಲ್ಲಿ ಸೊಗಾಸಾಗಿ ವಿವರಿಸುತ್ತದೆ  ಈ ಕತೆ 
Ep101+-+%E0%B2%95%E0%B2%A4%E0%B3%86%E0%B2%97%E0%B2%B3%E0%B3%81+%E0%B2%B9%E0%B3%87%E0%B2%97%E0%B3%86+%E0%B2%B9%E0%B3%81%E0%B2%9F%E0%B3%8D%E0%B2%9F%E0%B2%BF%E0%B2%A6%E0%B2%B5%E0%B3%81%3F
access_time5 months ago
ಆಫ್ರಿಕಾದ ಜಾನಪದ ಕತೆಗಳು ಮನುಷ್ಯ ತನ್ನ ಸುತ್ತ ಮುತ್ತಲಿನ ಪ್ರಾಣಿ , ಪಕ್ಷಿ , ಪರಿಸರವನ್ನು  ಅರ್ಥ ಮಾಡಿಕೊಂಡ  ಬಗೆಯನ್ನು  ತಮ್ಮದೇ ರೀತಿಯಲ್ಲಿ ಹಿಡಿದಿಡುತ್ತವೆ .  
ಆದರೆ , ಈ ಕತೆಗಳು ಹೇಗೆ ಹುಟ್ಟಿದವು ಅನ್ನುವುದಕ್ಕೂ ಒಂದು ಕತೆ ಇದೆ ಅಂದರೆ ಆಶ್ಚರ್ಯ ಆಗುತ್ತೆ ಅಲ್ವಾ ?  ಹೆಚ್ಚು ತಿಳಿಯಲು  ಈ ವಾರದ ಕತೆ ಕೇಳಿ . 
Ep100+-+%E0%B2%85%E0%B2%A8%E0%B2%BE%E0%B2%82%E0%B2%B8%E0%B2%BF+%E0%B2%AE%E0%B2%A4%E0%B3%8D%E0%B2%A4%E0%B3%81+%E0%B2%AE%E0%B2%BE%E0%B2%AF%E0%B2%BE+%E0%B2%AE%E0%B2%A1%E0%B2%BF%E0%B2%95%E0%B3%86
access_time5 months ago
ಆಫ್ರಿಕಾದ ಜಾನಪದ ಕತೆಗಳು " ಮಾಲಿಕೆಯಲ್ಲಿ ಈ ಕತೆ ಮೊದಲನೆಯದು . ಒಟ್ಟು ನಾವು ಮಾಡಿದ ಕತೆಗಳಲ್ಲಿ ಒಂದು ನೂರನೆಯದು ಕೂಡ .  ಮತ್ತೊಂದು ವಿಶೇಶ - ಈ ಕತೆ ಖ್ಯಾತ ಗಾಯಕಿ , ಕಲಾವಿದೆ ಶ್ರೀಮತಿ ಎಂ ಡಿ ಪಲ್ಲವಿ ಅವರ ನಿರೂಪಣೆ . 
 
ಅನಾಂಸಿ ಅನ್ನುವ ಜೇಡರ ಹುಳು ಪ್ರಪಂಚದ ವಿವೇಕ , ಬುದ್ದಿ ಶಕ್ತಿಯನ್ನೆಲ್ಲ ಒಟ್ಟು ಮಾಡಿ ಮಡಿಕೆಯಲ್ಲಿ ಕೂಡಿಟ್ಟು ಕೊಂಡಾಗ ಆಗಿದ್ದೇನು ? ಮುಂದಿನದನ್ನು ಪಲ್ಲವಿಯವರ ದನಿಯಲ್ಲೇ ಕೇಳಿ . 
Ep99+-+%E0%B2%A8%E0%B2%BF%E0%B2%A6%E0%B3%8D%E0%B2%B0%E0%B3%86+%E0%B2%AC%E0%B2%B0%E0%B2%A6%E0%B2%BF%E0%B2%A6%E0%B3%8D%E0%B2%A6+%E0%B2%B0%E0%B2%BE%E0%B2%9C
access_time5 months ago
ಈ ಸಲದ ಕತೆ ಉತ್ತರ ಕರ್ನಾಟಕ ಶೈಲಿಯಲ್ಲಿ  ನಿರೂಪಿಸಿರುವ ರಾಜನೊಬ್ಬನ  ಕತೆ .  ರಾಜನಿಗೆ ಏನು ಮಾಡಿದರೂ ರಾತ್ರಿ  ನಿದ್ರೆ ಬರುತ್ತಿರಲಿಲ್ಲ .  ಎಷ್ಟೇ ಮದ್ದು , ಗುಳಿಗೆ  ತಿಂದರೂ , ವ್ರತ , ದಾನ ಮಾಡಿದರೂ ನಿದ್ರೆ ಮಾತ್ರ ದೂರವೇ  ಉಳಿದಿತ್ತು . 
ಅಷ್ಟೆಲ್ಲ ಕಷ್ಟ ಪಟ್ಟರೂ ಗುಣವಾಗದ ರಾಜನ ನಿದ್ರೆ ಖಾಯಿಲೆಯನ್ನ   ಒಬ್ಬ ಸಾಮಾನ್ಯ ಮರ ಕಡಿಯುವವ ಗುಣ ಪಡಿಸಿದ್ದು ಹೇಗೆ . ? 
 
"ಮಂಗ್ಯಾ , ಮೊಸಳಿ ಕತಿ " ಆದಮೇಲೆ ಉತ್ತರ ಕರ್ನಾಟಕ ಶೈಲಿಯಲ್ಲಿ ನಿರೂಪಿಸಿರುವ ಎರಡನೇ ಕತೆ ಇದು . 
Repeat+-+%E0%B2%B6%E0%B2%AE%E0%B2%82%E0%B2%A4%E0%B2%95+%E0%B2%AE%E0%B2%A3%E0%B2%BF%E0%B2%AF+%E0%B2%95%E0%B2%A4%E0%B3%86
access_time5 months ago
ಈ ಕಂತು ೨೦೧೯ ರ ಗಣೇಶ ಹಬ್ಬದ ಸಮಯದಲ್ಲಿ ಮಾಡಿದ ಕತೆ .  
ಈ ವರ್ಷದ ಗೌರಿ ಗಣೇಶ ಹಬ್ಬಕ್ಕೆ ಶಮಂತಕ ಮಣಿಯ ಕತೆ . 
Ep98+-+%E0%B2%B8%E0%B2%BF%E0%B2%82%E0%B2%B9%E0%B2%B5%E0%B2%A8%E0%B3%8D%E0%B2%A8%E0%B3%81+%E0%B2%B8%E0%B3%8B%E0%B2%B2%E0%B2%BF%E0%B2%B8%E0%B2%BF%E0%B2%A6+%E0%B2%AE%E0%B3%8A%E0%B2%B2%E0%B2%A6+%E0%B2%95%E0%B2%A4%E0%B3%86
access_time6 months ago
ಏನು ? ಸಿಂಹದಂಥ  ಬಲಿಷ್ಠ  ಪ್ರಾಣಿ  ಎಲ್ಲಿ ? ಮೊಲದಂಥ  ಪೀಚು  ಪ್ರಾಣಿ  ಎಲ್ಲಿ ?  ಆದರೂ ಸಿಂಹದ ಶಕ್ತಿಯ ಮುಂದೆ ಮೊಲದ  ಯುಕ್ತಿಯೇ ಮೇಲಾಯಿತು . 
ಒಂದೊಂದು ಸಲ ನಮ್ಮ  ಮುಂದೆ  ಕೆಟ್ಟದ್ದು  ನಡೆಯುತ್ತಿದ್ದರೂ , ಅಸಹಾಯಕರಾಗುವುದು ಸಹಜ . ಅದರಲ್ಲೂ ಎದುರಾಳಿ ಬಲಿಷ್ಠನಾಗಿದ್ದರಂತೂ , ಇನ್ನೇನು ಎಲ್ಲ ಮುಗಿದೇ ಹೋಯಿತು ಅನ್ನಿಸುವಾಗ , ಈ  ಕತೆ ಸ್ಫೂರ್ತಿ ಕೊಡುತ್ತದೆ . 
Ep97+-+%E0%B2%9F%E0%B3%8B%E0%B2%AA%E0%B2%BF+%E0%B2%AE%E0%B2%BE%E0%B2%B0%E0%B3%81%E0%B2%B5%E0%B2%B5+%E0%B2%B9%E0%B2%BE%E0%B2%97%E0%B3%82+%E0%B2%AE%E0%B2%82%E0%B2%97%E0%B2%97%E0%B2%B3%E0%B3%81
access_time6 months ago
ಟೋಪಿ ಬೇಕಾ ಟೋಪಿ " ಅಂತ  ಕೂಗುತ್ತಾ  ಬರುವ  ಟೋಪಿ ಮಾರುವವನ ಕತೆ  ಶಾಲೆಗಳಲ್ಲಿ ನಾಟಕದ ರೂಪದಲ್ಲೋ , ಪಠ್ಯದಲ್ಲೋ ನೋಡದವರು ಕಡಿಮೆ .  ಈಗ  ಈ ಕತೆಯನ್ನು ಈಗಿನ  ಪುಟಾಣಿಗಳೂ ಕೇಳಬಹುದು . 
ಟೋಪಿ ಮಾರುವವನ ಟೋಪಿಗಳನ್ನು ಚೇಷ್ಟೆ ಮಂಗಗಳು ಹೊತ್ತುಕೊಂಡು ಮರದ   ಮೇಲೆ ಹತ್ತಿ ಕುಳಿತಾಗ ಟೋಪಿ ಮಾರುವವ  ವಾಪಸ್ ಪಡೆಯೋದಕ್ಕೆ ಏನೆಲ್ಲಾ ಸಾಹಸ  ಮಾಡಬೇಕಾಯ್ತು ಅನ್ನುವುದನ್ನು  ಈ ಕತೆ ತಿಳಿ  ಹಾಸ್ಯದೊಂದಿಗೆ ಹೇಳುತ್ತದೆ . 
 
 
Ep96+-+%E0%B2%AC%E0%B2%BE%E0%B2%AF%E0%B2%BF%E0%B2%AC%E0%B2%A1%E0%B3%81%E0%B2%95+%E0%B2%86%E0%B2%AE%E0%B3%86+%E0%B2%AE%E0%B2%A4%E0%B3%8D%E0%B2%A4%E0%B3%81+%E0%B2%AC%E0%B2%BE%E0%B2%A4%E0%B3%81%E0%B2%95%E0%B3%8B%E0%B2%B3%E0%B2%BF%E0%B2%97%E0%B2%B3%E0%B3%81
access_time6 months ago
ಮಾತು ಹಿತ , ಮಿತವಾಗಿರಬೇಕು ಅನ್ನುತ್ತಾರೆ .  ಜತೆಗೆ ಸಮಯೋಚಿತವಾಗಿರಬೇಕು ಕೂಡ .  ಸಲ್ಲದ  ಜಾಗದಲ್ಲಿ ಬೇಡ ಮಾತುಗಳಾಡಿದರೆ ತೊಂದರೆ ತಪ್ಪಿದ್ದಲ್ಲ ಅನ್ನುವುದಕ್ಕೆ ಈ ಕತೆ ಒಳ್ಳೆಯ ಉದಾಹರಣೆ .  ಸಹಾಯ ಬೇಕಾಗಿದ್ದ ಆಮೆಯೊಂದಕ್ಕೆ , ಬಾತುಕೋಳಿಗಳು ಸಹಾಯ ಮಾಡುವುದಕ್ಕೆ ಮೊದಲು ಒಂದು  ಷರತ್ತು ಹಾಕಿದವು .  ಆಮೇಲೆ ಏನಾಯ್ತು ಅನ್ನೋದನ್ನ ಕತೆಯಲ್ಲಿ  ಕೇಳಿ . 
Ep95+-+%E0%B2%AA%E0%B2%BE%E0%B2%B0%E0%B2%BF%E0%B2%B5%E0%B2%BE%E0%B2%B3+%E0%B2%AE%E0%B2%A4%E0%B3%8D%E0%B2%A4%E0%B3%81+%E0%B2%87%E0%B2%B0%E0%B3%81%E0%B2%B5%E0%B3%86%E0%B2%AF+%E0%B2%95%E0%B2%A4%E0%B3%86
access_time6 months ago
ಉಪಕಾರ ಮಾಡಿದವರನ್ನು ಇಂದಿಗೂ ಮರೆಯಬಾರದು ಅಂತ  ಗಾದೆಯ ಹಾಗೆ , ಪುಟ್ಟ ಇರುವೆಯೂ , ದೊಡ್ಡ ಪಾರಿವಾಳವೂ ಒಬ್ಬರಿಗೊಬ್ಬರು  ಉಪಕಾರ  ಮಾಡಿದ್ದು  ಹೇಗೆ . ? ಪುಟ್ಟ  ಇರುವೆಯಿಂದ  ದೊಡ್ಡ ಪಾರಿವಾಳಕ್ಕೆ ಆದ  ಉಪಕಾರವಾದರೂ ಏನು . ? ಬನ್ನಿ,  ಈ ಕತೆಯಲ್ಲಿ  ತಿಳಿದುಕೊಳ್ಳೋಣ . 
Ep94+-+%E0%B2%9A%E0%B2%BF%E0%B2%A8%E0%B3%8D%E0%B2%A8%E0%B2%A6+%E0%B2%AE%E0%B3%8A%E0%B2%9F%E0%B3%8D%E0%B2%9F%E0%B3%86%E0%B2%AF+%E0%B2%95%E0%B2%A4%E0%B3%86
access_time7 months ago
ಮೊಟ್ಟೆ ಇಡುವ ಕೋಳಿ , ಬಾತು ಕೋಳಿಯ ಬಗ್ಗೆ ಕೇಳಿರ್ತೀರ  , ಆದರೆ ಚಿನ್ನದ ಮೊಟ್ಟಿ ಇಡುವ ಬಾತು ಕೋಳಿಯ ಬಗ್ಗೆ ಕೇಳಿದ್ದೀರಾ ?  
ಚಿನ್ನದ ಮೊಟ್ಟೆ ಇಡುವ  ಬಾತು ಕೋಳಿಯನ್ನು  ನೋಡಿ  ರೈತನ  ಹೆಂಡತಿ ಅಸೆ ಪಟ್ಟಿದ್ದೆ ಬೇರೆ , ಆದರೆ ಆದದ್ದೇ ಬೇರೆ . 
ದುರಾಸೆ ಪಟ್ಟರೆ ದುಃಖ ತಪ್ಪಿದ್ದಲ್ಲ  ಅನ್ನುವುದಕ್ಕೆ ಈ ಕತೆ ಒಳ್ಳೆಯ  ಉದಾಹರಣೆ . 
 
 
 
Ep93+-+%E0%B2%AE%E0%B2%B0+%E0%B2%95%E0%B2%A1%E0%B2%BF%E0%B2%AF%E0%B3%81%E0%B2%B5%E0%B2%B5%E0%B2%A8+%E0%B2%95%E0%B2%A4%E0%B3%86
access_time7 months ago
ಈ ವಾರ ಮತ್ತೊಂದು ಜನಪ್ರಿಯ ಕತೆ " ಮರ ಕಡಿಯುವವನ ಕತೆ ". ಪಂಚತಂತ್ರದ ಕತೆಗಳು ಅಂದ ತಕ್ಷಣ ನೆನಪು ಬರುವ ಕತೆಗಳಲ್ಲಿ ಈ ಕತೆ ಪ್ರಮುಖವಾದದ್ದು .   
ಪ್ರಾಮಾಣಿಕತೆ , ಸತ್ಯ ನಿಷ್ಠತೆ , ಸರಳತೆ ಅಂತಹ ಗುಣಗಳು ಈ ಕತೆಯಲ್ಲಿ ವಿಶೇಷವಾಗಿ ಕಾಣಸಿಗುತ್ತವೆ . 
Ep92+%E2%80%93+%E0%B2%A4%E0%B3%8B%E0%B2%B3+%E0%B2%AE%E0%B2%A4%E0%B3%8D%E0%B2%A4%E0%B3%81+%E0%B2%AE%E0%B3%87%E0%B2%95%E0%B3%86+%E0%B2%AE%E0%B2%B0%E0%B2%BF%E0%B2%AF+%E0%B2%95%E0%B2%A4%E0%B3%86
access_time7 months ago
ದಾರಿ ತಪ್ಪಿಸಿಕೊಂಡ ಮೇಕೆ ಮರಿ ಒಂದು ತೋಳದ ಕೈಗೆ ಸಿಕ್ಕಾಗ , ತುಂಬಾ ಭಯವಾದರೂ , ಸರಿಯಾದ ಸಮಯಕ್ಕೆ ಉಪಾಯವೊಂದನ್ನು ಮಾಡಿ ತೋಳವನ್ನು ಹೆದರಿ ಓಡಿ ಹೋಗುವಂತೆ ಮಾಡ್ತು .   ತೋಳ ಹೆದರಿ ಓಡಿದ್ದು  ಯಾಕೆ ? ಅಂತ ತಿಳಿಯಲು ಈ ಮುದ್ದಾದ ಕತೆ ಕೇಳಿ
Ep92+-+%E0%B2%A4%E0%B3%8B%E0%B2%B3+%E0%B2%AE%E0%B2%A4%E0%B3%8D%E0%B2%A4%E0%B3%81+%E0%B2%AE%E0%B3%87%E0%B2%95%E0%B3%86++%E0%B2%AE%E0%B2%B0%E0%B2%BF%E0%B2%AF+%E0%B2%95%E0%B2%A4%E0%B3%86
access_time7 months ago
ದಾರಿ ತಪ್ಪಿಸಿಕೊಂಡ ಮೇಕೆ ಮರಿ ಒಂದು ತೋಳದ ಕೈಗೆ ಸಿಕ್ಕಾಗ , ತುಂಬಾ ಭಯವಾದರೂ , ಸರಿಯಾದ ಸಮಯಕ್ಕೆ ಉಪಾಯವೊಂದನ್ನು ಮಾಡಿ ತೋಳವನ್ನು ಹೆದರಿ ಓಡಿ ಹೋಗುವಂತೆ ಮಾಡ್ತು .   ತೋಳ ಹೆದರಿ ಓಡಿದ್ದು  ಯಾಕೆ ? ಅಂತ ತಿಳಿಯಲು ಈ ಮುದ್ದಾದ ಕತೆ ಕೇಳಿ .     
Ep91+-+%E0%B2%86%E0%B2%AE%E0%B3%86+%E0%B2%AE%E0%B2%A4%E0%B3%8D%E0%B2%A4%E0%B3%81+%E0%B2%AE%E0%B3%8A%E0%B2%B2%E0%B2%A6++%E0%B2%95%E0%B2%A4%E0%B3%86
access_time7 months ago
ಇಂದಿನ ಸಂಚಿಕೆಯಲ್ಲಿ ಜನಪ್ರಿಯ ಕತೆ "ಆಮೆ ಮತ್ತು ಮೊಲ "ದ ಕತೆ .   ಪ್ರಪಂಚದ ನಾನಾ ಭಾಷೆಗಳಲ್ಲಿ ಹೇಳಪಡುವ ಈ ಕತೆ ಮಕ್ಕಳಿಂದ ದೊಡ್ಡವರ ತನಕ ಎಲ್ಲರೂ ಕೇಳಿ ಖುಷಿ ಪಡಬಹುದಾದದ್ದು .  ನೀವೂ ಕೇಳಿ , ಬೇರೆಯವರಿಗೂ ತಿಳಿಸಿ .  ಕತೆಯನ್ನು ಕೇಳುವ ಅನುಭವವನ್ನು ಇನ್ನಷ್ಟು ಹೆಚ್ಚುಗೊಳಿಸಲು , ಈ ಕತೆ ಇರುವ ಪುಸ್ತಕವನ್ನು  ಮಕ್ಕಳಿಗೆ ಓದಿ ಹೇಳಿ . ನಂತರ , ನಮ್ಮ ವೆಬ್ಸೈಟ್ ನಲ್ಲಿರುವ ಚಿತ್ರ ಪುಟಗಳನ್ನು ಇಳಿಸಿಕೊಂಡು ಬಣ್ಣ ಹಚ್ಚಿ ಖುಷಿ ಪಡಿ .   
Ep90-%E0%B2%A8%E0%B2%B0%E0%B2%BF+%E0%B2%AE%E0%B2%A4%E0%B3%8D%E0%B2%A4%E0%B3%81+%E0%B2%A1%E0%B3%8A%E0%B2%B3%E0%B3%8D%E0%B2%B3%E0%B3%81
access_time8 months ago
ನರಿ ಮತ್ತು ಡೊಳ್ಳು, ಪಂಚತಂತ್ರದ ಜನಪ್ರಿಯ ಕತೆಗಳಲ್ಲೊಂದು . ಕಾಡಿನಲ್ಲಿ ಬರುತ್ತಿದ್ದ ಸದ್ದು ಯಾವುದೋ ಭಯಂಕರ ಪ್ರಾಣಿಯದೇ ಇರಬೇಕು ಅಂತ ಹೆದರಿಕೆಯಿಂದ ಹೆಜ್ಜೆಯಿಡುತ್ತಿದ್ದ ನರಿಗೆ ಡೊಳ್ಳು ನೋಡಿ ಇಷ್ಟೇನಾ ಅಂತ ಅನ್ನಿಸಿತು . ಆದರೆ , ಡೊಳ್ಳು ಬಡಿಯುತ್ತಿದ್ದವರು ಯಾರು ? ತಿಳಿಯಲು ಕತೆ ಕೇಳಿ      
Ep89+-+%E0%B2%87%E0%B2%A8%E0%B2%BF+%E0%B2%A6%E0%B2%A8%E0%B2%BF+-+%E0%B2%AD%E0%B2%BE%E0%B2%97+%E0%B2%A8%E0%B2%BE%E0%B2%B2%E0%B3%8D%E0%B2%95%E0%B3%81
access_time8 months ago
ಇನಿ ದನಿ " - ಸರಕಾರೀ ಹಿರಿಯ ಪ್ರಾಥಮಿಕ ಶಾಲೆ ,ನೆಟ್ಲ  ಮಕ್ಕಳು ನಡೆಸಿಕೊಡುತ್ತಿರುವ ಆಡಿಯೋ ಸರಣಿ .  ಈ ವಾರದ ಕಾರ್ಯಕ್ರಮದಲ್ಲಿ ಮಕ್ಕಳು "ತಾಯಿ ಶಾರದೆ " ಎಂಬ ಪದ್ಯ ,  "ಸರಕಾರೀ ಕನ್ನಡ ಶಾಲೆಯ " ಬಗ್ಗೆ  ಒಂದು ಪುಟ್ಟ  ಕತೆ , ಹಾಗೂ ಕೊನೆಯಲ್ಲಿ ಒಂದು ಸಂಭಾಷಣೆ. "ಅಯ್ಯೋ , ಸರಕಾರೀ ಶಾಲೆಯೇ ? ಅಲ್ಲೇನಿದೆ ? ಅಲ್ಲಿಗೆ ಯಾಕೆ ಮಕ್ಕಳನ್ನು ಕಳಿಸಬೇಕು ?" ಅನ್ನುವ ಈಗಿನ ಪರಿಸ್ಥಿತಿಯಲ್ಲಿ ಈ  ಶಾಲೆಯ ಮಕ್ಕಳು ತೋರಿಸಿರುವ ಕ್ರಿಯಾತ್ಮಕ ಶಕ್ತಿ , ಪ್ರತಿಭೆ ಈ ಆಡಿಯೋ ಸರಣಿಯಲ್ಲಿ ಸ್ಪಷ್ಟವಾಗಿ ಕಾಣಿಸಿದೆ .   "ಎಲ್ಲಾ ಶಾಲೆಗಳಲ್ಲಿ ಇಂತಹ ಕಾರ್ಯಕ್ರಮಗಳು ಇದ್ದರೆ  ಎಷ್ಟು ಚಂದ ? " ಅನ್ನುವ  ಪ್ರತಿಕ್ರಿಯೆಗಳು ಬಹಳಷ್ಟು ಬಂದಿವೆ .  ಈ ಕಂತು , "ಇನಿ ದನಿ " ಸರಣಿಯ ಕೊನೆಯ  ಕಂತು . ನಡೆಸಿಕೊಟ್ಟ ಎಲ್ಲಾ ಮಕ್ಕಳಿಗೂ , ಶಿಕ್ಷಕರಿಗೂ ಅಭಿನಂದನೆಗಳು .   
Ep87+-+%E0%B2%87%E0%B2%A8%E0%B2%BF+%E0%B2%A6%E0%B2%A8%E0%B2%BF+-+%E0%B2%AD%E0%B2%BE%E0%B2%97+%E0%B2%AE%E0%B3%82%E0%B2%B0%E0%B3%81
access_time8 months ago
ಇನಿ ದನಿ " - ಸರಕಾರೀ ಹಿರಿಯ ಪ್ರಾಥಮಿಕ ಶಾಲೆ ,ನೆಟ್ಲ  ಮಕ್ಕಳು ನಡೆಸಿಕೊಡುತ್ತಿರುವ ಆಡಿಯೋ ಸರಣಿ .  ಈ ವಾರದ ಕಾರ್ಯಕ್ರಮದಲ್ಲಿ ಮಕ್ಕಳು "ಮಂಗಳ ಗ್ರಹದಲ್ಲಿ ಪುಟ್ಟಿ " ಎಂಬ ಪದ್ಯ , "ಗಂಧರ್ವ  ಸೇನಾ " ಅನ್ನುವ ಹಾಸ್ಯ ನಾಟಕ  ನಡೆಸಿಕೊಡುತ್ತಾರೆ .  ಇಂಪಾದ ಹಿನ್ನಲೆ ಸಂಗೀತ , ಹಾಸ್ಯಭರಿತ ಸಂಭಾಷಣೆ ಇರುವ ಈ ನಾಟಕ ಹಾಗೂ ಮುದ್ದಾದ ಕಾವ್ಯ ವಾಚನ ಮಕ್ಕಳಿಗೆ ಇಷ್ಟವಾಗುವುದರಲ್ಲಿ ಸಂದೇಹವಿಲ್ಲ .   
Ep87+-+%E0%B2%87%E0%B2%A8%E0%B2%BF+%E0%B2%A6%E0%B2%A8%E0%B2%BF+-+%E0%B2%AD%E0%B2%BE%E0%B2%97+%E0%B2%8E%E0%B2%B0%E0%B2%A1%E0%B3%81
access_time8 months ago
ಇನಿ ದನಿ " - ಸರಕಾರೀ ಹಿರಿಯ ಪ್ರಾಥಮಿಕ ಶಾಲೆ ,ನೆಟ್ಲ  ಮಕ್ಕಳು ನಡೆಸಿಕೊಡುತ್ತಿರುವ ಆಡಿಯೋ ಸರಣಿ .  ಈ ವಾರದ ಕಾರ್ಯಕ್ರಮದಲ್ಲಿ "ಬೆಣ್ಣೆ  ಕರಗಿತು " ಅನ್ನುವ ನಾಟಕ ನಡೆಸಿಕೊಡುತ್ತಾರೆ . ಇಂಪಾದ ಹಿನ್ನಲೆ ಸಂಗೀತ , ಹಾಸ್ಯಭರಿತ ಸಂಭಾಷಣೆ ಇರುವ ಈ ನಾಟಕ ಮಕ್ಕಳಿಗೆ ಇಷ್ಟವಾಗುವುದರಲ್ಲಿ ಸಂದೇಹವಿಲ್ಲ .  ಕದ್ದು ತಂದ ಬೆಣ್ಣೆಯ ಸಲುವಾಗಿ ಜಗಳವಾಡುತ್ತಿದ್ದ ಎರಡು ಬೆಕ್ಕುಗಳಿಗೆ ಚಳ್ಳೆಹಣ್ಣು ತಿನಿಸುವ ಯೋಜನೆ ಮಾಡಿದ ಮಂಗಪ್ಪ ತಾನೇ ಪೇಚಿಗೆ ಸಿಕ್ಕಿದ  ಈ ಕತೆ ಕೇಳೋಕೆ ಬಲು ಮೋಜು .     
Ep86+-+%E0%B2%87%E0%B2%A8%E0%B2%BF+%E0%B2%A6%E0%B2%A8%E0%B2%BF+-+%E0%B2%AD%E0%B2%BE%E0%B2%97+%E0%B2%92%E0%B2%82%E0%B2%A6%E0%B3%81
access_time9 months ago
ಇನಿ ದನಿ " - ಸರಕಾರೀ ಹಿರಿಯ ಪ್ರಾಥಮಿಕ ಶಾಲೆ ,ನೆಟ್ಲ  ಮಕ್ಕಳು ನಡೆಸಿಕೊಡುತ್ತಿರುವ ಆಡಿಯೋ ಸರಣಿ .  ಈ ವಾರದ ಕಾರ್ಯಕ್ರಮದಲ್ಲಿ ಚೂಟಿ ಮಕ್ಕಳಿಂದ ಪುಟ್ಟ ಹಾಡು , ಕಥೆ ನಿರೂಪಣೆ  , ನಾಟಕ , ಪ್ಲಾಸ್ಟಿಕ್ ಬಳಕೆಯ ಬಗ್ಗೆ ಕೆಲವು ಮಾತುಗಳು.  " ಕೇಳಿರೊಂದು ಕಥೆಯ "  ತಂಡಕ್ಕೆ ಇದೊಂದು ವಿನೂತನ ಪ್ರಯತ್ನ .  ನೀವೂ ಕೇಳಿ , ನಿಮ್ಮ ಮಕ್ಕಳಿಗೂ ಕೇಳಿಸಿ . ಈ ಕಾರ್ಯಕ್ರಮ ಕೇಳಿದ ಮೇಲೆ , ನಿಮ್ಮ ಮಕ್ಕಳೂ "ಅಮ್ಮಾ , ನಾನೂ ಕಥೆ ಹೇಳ್ತೇನೆ " ಅಂತ ಹೇಳಬಹುದು .  ನಿಮ್ಮೆಲ್ಲ ಬೆಂಬಲಕ್ಕಾಗಿ ಧನ್ಯವಾದಗಳು  . 
Ep85+-+%E0%B2%B5%E0%B2%BF%E0%B2%B6%E0%B3%87%E0%B2%B7+-+%E0%B2%AE%E0%B2%95%E0%B3%8D%E0%B2%95%E0%B2%B3%E0%B2%BF%E0%B2%97%E0%B2%BE%E0%B2%97%E0%B2%BF+%E0%B2%A1%E0%B2%BE+.+%E0%B2%B0%E0%B2%BE%E0%B2%9C%E0%B3%8D+%E0%B2%95%E0%B3%81%E0%B2%AE%E0%B2%BE%E0%B2%B0%E0%B3%8D
access_time9 months ago
ಕಳೆದ  ಶುಕ್ರವಾರ , ಏಪ್ರಿಲ್ ೨೪ , ಡಾ ರಾಜ್ ಕುಮಾರ್ ಅವರ  ಹುಟ್ಟುಹಬ್ಬ . ಸದಭಿರುಚಿಯ ಚಲನಚಿತ್ರಗಳ ಮೂಲಕ ಅಷ್ಟೇ  ಅಲ್ಲ , ಕನ್ನಡಿಗರ ದನಿಯಾಗಿ , ಮಾನವತಾವಾದಿಯಾಗಿ ರಾಜ್ ಕುಮಾರ್ ಕನ್ನಡಿಗರಿಗೆ ಚಿರಪರಿಚಯ .   1990 ರಿಂದ ಮುಂಚೆ ಹುಟ್ಟಿದ ಕನ್ನಡಿಗರಿಗೆ ರಾಜ್ ಕುಮಾರ್ ಪರಿಚಯವೇ ಬೇಡ . ಆದರೆ , ಮಕ್ಕಳಿಗೆ ರಾಜಕುಮಾರ್ ಅವರ ಪರಿಚಯ ಮಾಡುವ ಪ್ರಯತ್ನ ಆದಂತಿಲ್ಲ .   ರಾಜಕುಮಾರ್  ಹುಟ್ಟುಹಬ್ಬದ  ನೆನಪಿನಲ್ಲಿ , " ಮಕ್ಕಳಿಗಾಗಿ ಡಾ  ರಾಜಕುಮಾರ್  "  , ಅವರ ವ್ಯಕ್ತಿತ್ವದ ಕಿರು ಪರಿಚಯ , ಪುಟ್ಟ ಮಕ್ಕಳಿಗಾಗಿ .    
Ep84+-+%E0%B2%AD%E0%B2%97%E0%B3%80%E0%B2%B0%E0%B2%A5+%E0%B2%AA%E0%B3%8D%E0%B2%B0%E0%B2%AF%E0%B2%A4%E0%B3%8D%E0%B2%A8
access_time9 months ago
ಭಾರತೀಯ  ಸಂಸ್ಕೃತಿಯಲ್ಲಿ ಪ್ರತಿ ಜೀವಿ , ವಸ್ತುವಿಗೂ ಒಂದು  ಸ್ವಾರಸ್ಯಕರ  ಕತೆಯುಂಟು . ಕಾಡಿನಲ್ಲಿ ಬಿದ್ದಿರುವ ಬಳ್ಳಿಗೊಂದು  ಕತೆ , ದೂರದಲ್ಲಿ  ಕಾಣುವ ಬಂಡೆಗೂ ಒಂದು  ಕತೆ .  ಇಷ್ಟಿದ್ದಾಗ , ಭಾರತದ ಪವಿತ್ರ ನದಿ ಗಂಗೆಗೂ ಒಂದು  ಕತೆ  ಇರಲೇ  ಬೇಕಲ್ವೆ ?   
Ep83+-+%E0%B2%AD%E0%B3%80%E0%B2%AE+%E0%B2%B9%E0%B2%BE%E0%B2%97%E0%B3%82+%E0%B2%B9%E0%B2%A8%E0%B3%81%E0%B2%AE%E0%B2%82%E0%B2%A4
access_time9 months ago
ಮಹಾಭಾರತದಲ್ಲಿ ಬರುವ ಅಪೂರ್ವ ಪಾತ್ರ ಹನುಮಂತ .  ಹನುಮಂತ ಹಾಗೂ  ಭೀಮ ಪರಸ್ಪರ ಭೇಟಿಯಾಗಿ , ಹನುಮಂತ ಭೀಮನ  ಜತೆ ಕುಚೇಷ್ಟೆ ಮಾಡುವ  ಕತೆ  ಓದುವುದಕಷ್ಟೇ ಅಲ್ಲ , ಕೇಳುವುದಕ್ಕೂ ಬಹಳ  ಚಂದ .   
Ep82+-+%E0%B2%B5%E0%B2%BF%E0%B2%B7%E0%B3%8D%E0%B2%A3%E0%B3%81%E0%B2%B5%E0%B2%BF%E0%B2%A8+%E0%B2%87%E0%B2%A4%E0%B2%B0++%E0%B2%85%E0%B2%B5%E0%B2%A4%E0%B2%BE%E0%B2%B0%E0%B2%97%E0%B2%B3%E0%B3%81
access_time10 months ago
ದಶಾವತಾರ ಸರಣಿಯನ್ನು  ಮಾಡ ಹೊರಟಾಗ , ವಿಷ್ಣುವಿನ  ಹತ್ತು  ಅವತಾರಗಳಷ್ಟೇ ಅಂತ  ಅಂದು  ಕೊಂಡಿದ್ದೆವು . ಪ್ರತಿ  ಅವತಾರದ  ಕತೆ  ಬರೆಯುತ್ತಾ  ಹೋದಾಗ , ತಿಳಿದದ್ದು ವೇದ , ಪುರಾಣಗಳಲ್ಲಿ , ವಿಷ್ಣುವಿನ 35ಕ್ಕೂ  ಅವತಾರಗಳಿವೆ  ಅಂತ .  "ದಶಾವತಾರ " ಸರಣಿಯ ಕೊನೆಯ ಕಂತಿನಲ್ಲಿ , ಇತರ  ಕೆಲವು  ಅವತಾರಗಳ  ಕಿರು  ಪರಿಚಯ.          
Ep81+-+%E0%B2%97%E0%B3%8C%E0%B2%A4%E0%B2%AE+%E0%B2%AC%E0%B3%81%E0%B2%A6%E0%B3%8D%E0%B2%A7
access_time10 months ago
ದಶಾವತಾರದ ಸುಮಾರು ಅವತರಣಿಕೆ ( versions) ಗಳಲ್ಲಿ ಬುದ್ಧ ಹತ್ತು  ಅವತಾರಗಳಲ್ಲಿ  ಒಂದು ಪರಿಗಣಿಸುತ್ತಾರೆ .   ಈ ಕಂತಿನಲ್ಲಿ ಗೌತಮ  ಬುದ್ಧನ  ಕಿರು  ಪರಿಚಯ ಹಾಗೂ ಬುದ್ಧ  ಹುಡುಗನಾಗಿದ್ದ ಸಮಯದ  ಒಂದು  ಪುಟ್ಟ  ಕತೆಯನ್ನು ಹೇಳಲಾಗಿದೆ.    Photo Courtesy - Pari's Photography
Ep80+-+Special+Episode+-+%E0%B2%8F%E0%B2%A8%E0%B2%BF%E0%B2%A6%E0%B3%81+%E0%B2%95%E0%B3%8A%E0%B2%B0%E0%B3%8A%E0%B2%A8+%E0%B2%B5%E0%B3%88%E0%B2%B0%E0%B2%B8%E0%B3%8D
access_time10 months ago
A special episode about the mysterious Corona Virus ( COVID19) featuring Dr. Prakash and Dr. Sumana Kabbur , where we answer some questions sent by our young listeners.  ಕೊರೊನ ವೈರಸ್ ಬಗ್ಗೆ ನಮ್ಮ ಪುಟಾಣಿ  ಕೇಳುಗರು  ಕಳಿಸಿದ ಪ್ರಶ್ನೆಗಳಿಗೆ  ಈ ಕಂತಿನಲ್ಲಿ  ಡಾ . ಪ್ರಕಾಶ್  ಹಾಗೂ ಡಾ . ಸುಮನಾ ಕಬ್ಬೂರ್ ಅವರು  ಉತ್ತರಿಸಿದ್ದಾರೆ .  ಮನೆಯೊಳಗೆ ಪಾಲಿಸಬಹುದಾದ ಮಾದರಿ  ವೇಳಾಪಟ್ಟಿ  ಇಲ್ಲಿದೆ .    To learn more about the amazing job TrainAndHelp Babies is doing to increase newborn survival rate , visit https://www.trainandhelpbabies.com/.   
Ep79+-+%E0%B2%95%E0%B3%83%E0%B2%B7%E0%B3%8D%E0%B2%A3%E0%B2%BE%E0%B2%B5%E0%B2%A4%E0%B2%BE%E0%B2%B0
access_time10 months ago
ದಶಾವತಾರ " ಸರಣಿಯ  ಎಂಟನೆಯ  ಅವತಾರ  ಶ್ರೀ  ಕೃಷ್ಣನ  ಅವತಾರ . ರಾಮ, ಕೃಷ್ಣರ ಕತೆಗಳು  ಪ್ರತಿಯೊಬ್ಬರಿಗೂ ಚಿರ ಪರಿಚಿತ .  ಕೃಷ್ಣನ  ಜೀವನ  ಚರಿತ್ರೆಯನ್ನು  ಸರಳವಾಗಿ , ಚೊಕ್ಕವಾಗಿ ಈ ಕತೆಯಲ್ಲಿ  ಮುಂದಿಡಲಾಗಿದೆ .   
Ep78+-+%E0%B2%B0%E0%B2%BE%E0%B2%AE%E0%B2%A8++%E0%B2%85%E0%B2%B5%E0%B2%A4%E0%B2%BE%E0%B2%B0
access_time11 months ago
ದಶಾವತಾರ " ಸರಣಿಯ ಏಳನೇ ಕಂತು ರಾಮನ ಅವತಾರ .  ರಾಮಾಯಣ , ಮನೆ  ಮನೆಯ  ದಿನ  ಜೀವನದಲ್ಲಿ  ಹಾಸು  ಹೊಕ್ಕಾಗಿರುವ  ಮಹಾ  ಕಾವ್ಯ . ದೇವರ ಮನೆಯ  ಪೂಜೆಯಿಂದ  ಹಿಡಿದು , ಕುಳಿತಾಗೊಂದು ಸಲ "ರಾಮ ರಾಮ " ಅನ್ನುವ  ಅಜ್ಜಿಯರ ತನಕ , ರಾಮ ಸೀತೆಯರು ನಮ್ಮ  ಜೀವನದ ಭಾಗವಾಗಿ  ಬಿಟ್ಟಿದ್ದಾರೆ . ! ಅಷ್ಟು ದೊಡ್ಡ  ಕತೆಯನ್ನು  8 ನಿಮಿಷದಲ್ಲಿ ಸರಳವಾಗಿ ಹೇಳುವ ಪುಟ್ಟ  ಪ್ರಯತ್ನ  ಈ ಕತೆ .     
Ep77+-+%E0%B2%AA%E0%B2%B0%E0%B2%B6%E0%B3%81%E0%B2%B0%E0%B2%BE%E0%B2%AE+%E0%B2%85%E0%B2%B5%E0%B2%A4%E0%B2%BE%E0%B2%B0
access_time11 months ago
ದಶಾವತಾರ " ಸರಣಿಯಲ್ಲಿ  ಆರನೆಯ  ಅವತಾರ ಪರಶುರಾಮನ ಅವತಾರ .  ಪರಶುರಾಮ ಅತಿ  ಪರಾಕ್ರಮಿ . ಬ್ರಾಹ್ಮಣನಾಗಿದ್ದೂ , ಕ್ಷತ್ರಿಯರಿಗೆ ಸಿಂಹ ಸ್ವಪ್ನನಾಗಿದ್ದ. ಪರಶುರಾಮನ ಬಗ್ಗೆ  ಸಾಮಾನ್ಯವಾಗಿ ಸಿಗುವ ಕತೆಗಳು ಮಕ್ಕಳಿಗೆ  ಸ್ವಲ್ಪ ಹೆಚ್ಚೇ  ಹಿಂಸೆ ಅನ್ನಿಸಬಹುದು  ಎಂದು , ಪರಶುರಾಮ ಮತ್ತು  ಗಣೇಶನನ್ನು  ಒಳಗೊಂಡ ಅಪರೂಪದ ಒಂದೆರಡು ಕಥೆಗಳನ್ನು  ಸೇರಿಸಿದ್ದೇವೆ . ಕಥೆ  ಕೇಳಿ , ನಿಮ್ಮ  ಅಭಿಪ್ರಾಯ , ಅನಿಸಿಕೆಗಳನ್ನು kelirondu@gmail.com ಗೆ  ಕಳಿಸಿ .   
Ep76-%E0%B2%B5%E0%B2%BE%E0%B2%AE%E0%B2%A8%E0%B2%B5%E0%B2%A4%E0%B2%BE%E0%B2%B0
access_time11 months ago
ದಶಾವತಾರ " ಸರಣಿಯಲ್ಲಿ ೫ನೇ  ಅವತಾರ  ವಿಷ್ಣು ಕುಳ್ಳ ಬ್ರಾಹ್ಮಣನ  ಅವತಾರದಲ್ಲಿ  ಬಂದು  ಮಹಾ  ದಾನವಂತ  ಅನ್ನೋ  ಅಹಂಕಾರ ದಿಂದ  ಬೀಗುತ್ತಿದ್ದ  ರಾಕ್ಷಸ  ರಾಜ ಬಲಿ ಚಕ್ರವರ್ತಿಯ ಅಹಂಕಾರ  ಮುರಿಯುತ್ತಾನೆ .  ತಪ್ಪಿನ  ಅರಿವಾದ  ಬಲಿ ವಿಷ್ಣುವಿನ  ಕ್ಷಮೆ  ಕೇಳುತ್ತಾನೆ .  ಅಹಂಕಾರ  ಸಲ್ಲದು ಹಾಗೂ ನಾವು  ಎಷ್ಟೇ  ದೊಡ್ಡವರಿದ್ದರೂ ತಪ್ಪಾದ  ಕೂಡಲೇ ಒಪ್ಪಿಕೊಳ್ಳುವ  ದೊಡ್ಡ  ಗುಣ  ಇರಬೇಕು  ಅನ್ನುವ  ನೀತಿ  ಸಾರುವ  ಈ  ಕತೆ ದಶಾವತಾರದ  ಕತೆಗಳಲ್ಲಿ  ವಿಶಿಷ್ಟವಾದದ್ದು .    
Ep75+-+%E0%B2%A8%E0%B2%B0%E0%B2%B8%E0%B2%BF%E0%B2%82%E0%B2%B9%E0%B2%BE%E0%B2%B5%E0%B2%A4%E0%B2%BE%E0%B2%B0
access_time12 months ago
ದಶಾವತಾರ " ಸರಣಿಯಲ್ಲಿನಾಲ್ಕನೇ  ಅವತಾರ  ನರಸಿಂಹಾವತಾರ ಹಿರಣ್ಯಕಶಿಪುವಿನ  ಮಗ  ಪ್ರಹ್ಲಾದ , ವಿಷ್ಣುವಿನ  ಮಹಾ  ಭಕ್ತ . ಹಿರಣ್ಯಕಶಿಪು ಎಲ್ಲ  ಕಡೆ  ತನ್ನನ್ನೇ  ಪೂಜೆ  ಮಾಡಬೇಕು ಅಂತ  ದೇವತೆಗಳನ್ನು , ದೇವರ  ಭಕ್ತರನ್ನು  ಶಿಕ್ಷೆಗೆ ಗುರಿ  ಮಾಡಿದಾಗ ವಿಷ್ಣು ಅರ್ಧ ಸಿಂಹ , ಅರ್ಧ  ಮನುಷ್ಯನ  ಅವತಾರದಲ್ಲಿ  ಬಂದು ರಾಕ್ಷಸನಾದ  ಹಿರಣ್ಯಕಶಿಪುವನ್ನ  ಸಂಹಾರ  ಮಾಡುತ್ತಾನೆ .  
Ep74+-+%E0%B2%B5%E0%B2%B0%E0%B2%BE%E0%B2%B9%E0%B2%BE%E0%B2%B5%E0%B2%A4%E0%B2%BE%E0%B2%B0
access_time12 months ago
ದಶಾವತಾರ " ಸರಣಿಯಲ್ಲಿ ಮೂರನೇ ಅವತಾರ  ವರಾಹಾವತಾರ .  ವರಾಹ  ಅಂದರೆ   ಕಾಡು ಹಂದಿ  ಎಂದರ್ಥ . ಇಂಗ್ಲಿಷ್ನಲ್ಲಿ  wild boar ಅಂತಲೂ  ಕರೆಯುತ್ತಾರೆ .  ವೈಕುಂಠದ  ದ್ವಾರ  ಪಾಲಕರಾದ ಜಯ  - ವಿಜಯರು  ಭೂಮಿಯ  ಮೇಲೆ  ಹಿರಣ್ಯಾಕ್ಷ  ಹಾಗೂ  ಹಿರಣ್ಯಕಶಿಪು   ಎಂಬ  ರಾಕ್ಷಸರಾಗಿ ಹುಟ್ಟುತ್ತಾರೆ . ಬ್ರಹ್ಮನ ವಿಚಿತ್ರ  ವರದಿಂದ ಹಿರಣ್ಯಾಕ್ಷ  ಸಾವೇ  ಬರದಿರುವಷ್ಟು  ಬಲಶಾಲಿ ಆಗಿ ಸಿಕ್ಕಿದ್ದಾನು  ದ್ವಂಸ  ಮಾಡಿ  ಭೂಮಿ  ದೇವತೆಯನ್ನು  ಪಾತಾಳಕ್ಕೆ ಕರೆದು  ಹೋಗಿಬಿಡುತ್ತಾನೆ .   ವಿಷ್ಣು ವರಾಹ  ಅವತಾರ  ಧರಿಸಿ  ಭೂಮಿ  ದೇವತೆಯನ್ನ  ಬಿಡಿಸುತ್ತಾನೆ .   
Ep73+-+%E0%B2%95%E0%B3%82%E0%B2%B0%E0%B3%8D%E0%B2%AE%E0%B2%BE%E0%B2%B5%E0%B2%A4%E0%B2%BE%E0%B2%B0
access_time12 months ago
ದಶಾವತಾರ " ಸರಣಿಯಲ್ಲಿ ಎರಡನೇ  ಅವತಾರ  ಕೂರ್ಮಾವತಾರ .  ಕೂರ್ಮ ಅಥವಾ  ಆಮೆ ಭೂಮಿಯನ್ನು ಬೀಳದಂತೆ ಹಿಡಿದಿದೆ ಎಂಬ  ನಂಬಿಕೆ ಹಿಂದೂ , ಬೌದ್ಧ , ಚೀನೀ , ಅಮೆರಿಕಾದ ಇಂಡಿಯನ್ ಸಂಸ್ಕೃತಿಗಳಲ್ಲಿ ಪ್ರಚಲಿತ .    ದೇವತೆಗಳಿಗೆ  ಸಾವಿಲ್ಲದಂತೆ ಮಾಡುವ  "ಅಮೃತ " ಪಡೆಯೋಕೆ   ರಾಕ್ಷಸರು , ದೇವತೆಗಳಿಬ್ಬರೂ  ಸಮುದ್ರ  ಮಂಥನಕ್ಕೆ ನಿಂತಾಗ , ವಿಷ್ಣು  ಕೂರ್ಮ ಅಥವಾ  ಆಮೆಯ  ರೂಪದಲ್ಲಿ ಬಂದು  ದೇವತೆಗಳಿಗೆ  ಅಮೃತ ಸಿಗುವ  ಹಾಗೆ  ಮಾಡುತ್ತಾನೆ .      
Ep72+-+%E0%B2%AE%E0%B2%A4%E0%B3%8D%E0%B2%B8%E0%B3%8D%E0%B2%AF%E0%B2%BE%E0%B2%B5%E0%B2%A4%E0%B2%BE%E0%B2%B0%E0%B3%86
access_time1 year ago
ಭಾರತೀಯ ಸಂಸ್ಕೃತಿಯ  ಮಹಾನ್ ಅಸ್ತಿ ನಮ್ಮ ವೇದ-ಪುರಾಣಗಳು .  ಅದರಲ್ಲೂ ವಿಷ್ಣುವಿನ ದಶಾವತಾರಗಳು ಕೆಟ್ಟದ್ದನ್ನು ಕೆಡವಿ  ಒಳ್ಳೆಯದು ಒಂದಲ್ಲ ಒಂದು ರೂಪದಲ್ಲಿ ಬಂದೆ ಬರುತ್ತದೆ ಎನ್ನುವ  ನಂಬಿಕೆಗೆ ಇಂಬು ಕೊಡುತ್ತವೆ .   ಮುಂದಿನ  ಕೆಲವು ವಾರದಲ್ಲಿ , ಈ ದಶಾವತಾರದ  ಕತೆಗಳನ್ನು ಮಕ್ಕಳಿಗೆ ಸುಲಭವಾಗಿ ಅರ್ಥವಾಗುವ  ರೀತಿಯಲ್ಲಿ ತರುವ ಪ್ರಯತ್ನ ನಮ್ಮ ತಂಡ ಮಾಡುತ್ತಿದೆ .  ದಶಾವತಾರದ  ಮೊದಲನೇ ಅವತಾರವೇ  ಮತ್ಸ್ಯಾವತಾರ . ಮನುಷ್ಯ  ಪೀಳಿಗೆಯ ಜ್ಞಾನವೆಲ್ಲವೂ ಅಡಗಿದ್ದ  ವೇದಗಳನ್ನೇ ಕದಿಯಲು ಹೊರಟಿದ್ದ ಹಯಗ್ರೀವನೆಂಬ  ರಾಕ್ಷಸನಿಗೆ ಬುದ್ದಿ ಕಲಿಸಲು ವಿಷ್ಣು ಮೀನಿನ ವೇಷದಲ್ಲಿ ಬಂದ ಎಂದು  ಮತ್ಸ್ಯಪುರಾಣ ಹೇಳುತ್ತದೆ .      ಮೂಲ:  ಅಮರ ಚಿತ್ರಕಥಾ ಪುಸ್ತಕಗಳು    ಉಚಿತವಾಗಿ  ಕಥೆಗಳನ್ನು ಕೇಳಲು ಮಿಂದಾಣ - http://kelirondukatheya.org  Subscribe : https://podcasts.google.com/?feed=aHR0cDovL2tlbGlyb25kdWthdGhleWEub3JnL3Jzcw ಹೊಸ  ಕಥೆಗಳಿಗೆ Whatsapp ಗುಂಪಿಗೂ  ಸೇರಬಹುದು: https://chat.whatsapp.com/GsWybXllVFC6INaXFcNSnQ  Background :  Mesmerize by Kevin MacLeod is licensed under a Creative Commons Attribution license (https://creativecommons.org/licenses/by/4.0/) Source: http://incompetech.com/music/royalty-free/index.html?isrc=USUAN1500005 Artist: http://incompetech.com/  
Ep+71+-+%5B%E0%B2%B5%E0%B2%BF%E0%B2%B6%E0%B3%87%E0%B2%B7++%E0%B2%95%E0%B2%BE%E0%B2%B0%E0%B3%8D%E0%B2%AF%E0%B2%95%E0%B3%8D%E0%B2%B0%E0%B2%AE+%5D+-+%E0%B2%AE%E0%B2%95%E0%B3%8D%E0%B2%95%E0%B2%B3++%E0%B2%95%E0%B2%B2%E0%B3%8D%E0%B2%AA%E0%B2%A8%E0%B2%BE%E0%B2%B6%E0%B2%95%E0%B3%8D%E0%B2%A4%E0%B2%BF
access_time1 year ago
ಮಕ್ಕಳ ಕಲ್ಪನಾಶಕ್ತಿ ಯನ್ನು ಕೆರಳಿಸಲು 20 ಮೋಜಿನ ಪ್ರಶ್ನೆಗಳು ಮಕ್ಕಳನ್ನು  ಮಾತಾಡಿಸುವಾಗ , ಯಾವ  ಶಾಲೆಗೇ ಹೋಗುತ್ತೀ , ಎಷ್ಟು  ಮಾರ್ಕ್ಸ್ ತಗೊಂಡಿದ್ದೀ ಅಂತಹ ಪ್ರಶ್ನೆಗಳು  ಸರ್ವೇ ಸಾಮಾನ್ಯ . ಮುಂದಿನ ಸಲ ಮಕ್ಕಳ ಜತೆ  ಮಾತಾಡೋ ಅವಕಾಶ ಸಿಕ್ಕಾಗ ಈ ಕೆಳಗಿನ ಪ್ರಶ್ನೆಗಳನ್ನು ಕೇಳೋಕೆ  ಪ್ರಯತ್ನ ಮಾಡಿ . ಅವರ ಉತ್ತರಗಳು ಅವರ ಯೋಚನಾ ಲಹರಿ , ವ್ಯಕ್ತಿತ್ವ್ , , ಕುತೂಹಲ, ಆಸಕ್ತಿಗಳನ್ನೂ ಕೂಡ ಬಿಚ್ಚಿಡುತ್ತವೆ. ಎಲ್ಲಕ್ಕಿಂತ  ಹೆಚ್ಚಾಗಿ , ಪ್ರತಿಯೊಂದು ಮಗುವಿನೊಳಗಿರುವ ವಿಶೇಷತೆಯನ್ನ ಹೊರಗೆ ತರುತ್ತವೆ .  ನಿಮ್ಮ  ಅನುಭವವನ್ನು   ನಮ್ಮೊಡನೆ ಹಂಚಿಕೊಳ್ಳೋಕೆ  ಮರೆಯಬೇಡಿ !  ಇನ್ನೂ  ಕೆಲವು  ಪ್ರಶ್ನೆಗಳು  ! ೧. ನಿನಗೆ  ಕನಸು ಕಾಣೋದು  ಅಂದ್ರೆ ಇಷ್ಟಾನ ?  ನಿನ್ನ ಅಚ್ಚುಮೆಚ್ಚಿನ ಕನಸು ಯಾವುದು ? ೨. ನಿನಗೆ ಯಾವ ಕೆಲಸಗಳು ಮಾಡಿದ್ರೆ ಖುಷಿ ಆಗುತ್ತೆ ?  ೩. ನಿನ್ನ ಗೆಳೆಯರು ಹೇಗಿದ್ದಾರೆ ?  ಅವರಿಗೆ ಏನು ಮಾಡೋಕೆ ಇಷ್ಟ ? ೪. ಈ ಸದ್ಯ ನಿನಗೆ ಏನು ಬೇಕಾದ್ರೂ ಸಿಗೋದಾದ್ರೆ, ಏನು ಪಡೆಯಲಿ  ಇಷ್ಟ ? ಅದರಿಂದ  ಏನ್ಮಾಡ್ತಿಯಾ  ? ೫. ನಿನ್ನ ಅಚ್ಚು ಮೆಚ್ಚಿನ ಕಾರ್ಟೂನ್ ಯಾವುದು ? ಅದರಲ್ಲಿ  ಯಾವ ಪಾತ್ರ  ನಿನಗೆ  ತುಂಬಾ  ಇಷ್ಟ  ? ಯಾಕೆ  ಇಷ್ಟ  ?  ೬. ನೀನು ಹೊಸ ಉದ್ಯಮ / ಅಂಗಡಿ ಶುರು ಮಾಡೋದಾದ್ರ್ ಯಾವ ಥರ ಉದ್ಯಮ / ಅಂಗಡಿ ಶುರು ಮಾಡ್ತೀಯ ?  ೭. ನಿನಗೆ ಸೂಪರ್ ಮ್ಯಾನ್, ಸ್ಪೈಡೆರ್ ಮ್ಯಾನ್ ಥರ ಸೂಪರ್ ಹೀರೊ ನಿಮಗೆ ಇಷ್ಟಾನ ? ಹಾಗಾದರೇ,  ನೀನು ಸೂಪರ್ ಹೀರೊ ಆಗಿದ್ರೆ, ನೀನು ಯಾವ ಹೆಸರಿಟ್ಟು ಕೊಳ್ತಿದ್ದೆ ? ನಿನಗೆ ಯಾವೆಲ್ಲ  ವಿಶೇಷ ಶಕ್ತಿಗಳು ಬೇಕು? ೮. ನೀನು ಸಮುದ್ರಕ್ಕೆ ಹೋದೆ ಅಂತ ತಿಳಿದುಕೋ . ಎಲ್ಲದ್ದಕ್ಕಿಂತ ಮೊದಲು ಯಾವ ಆಟ ಆಡೋಕೆ ನಿನಗಿಷ್ಟ ? ೯. ನಿನಗೆ ಮನೆಯಲ್ಲಿ ಯಾವ ಗಿಡ ಬೆಳೆಸಲಿಕ್ಕೆ ಇಷ್ಟ ? ೧೦. .ನಿನ್ಹತ್ತಿರ ಆಟ ಸಾಮಾನುಗಳಿದ್ಯಲ್ಲ , ಅವು ಮಾತಾಡುವಂತಿದ್ದರೆ ಹೇಗಿರ್ತಿತ್ತು ? ಅವು  ಏನು  ಮಾತಾಡ್ತಿದ್ದವು ? ೧೧. ನಿನ್ಹತ್ತ್ರ ಬೇರೆಯವರಿಗೆ ಸಹಾಯ ಮಾಡೋಕೆ 1000 ರೂಪಾಯಿ ,ಇದ್ರೆ, ಯಾರಿಗೆ / ಏನು / ಯಾವ  ಸಹಾಯ ಮಾಡ್ತೀ ? ೧೨. ನೀನೆ  ಒಂದು ಪುಸ್ತಕ  ಬರೆದೆ ಅಂತ ಇಟ್ಕೋ .  ಯಾವುದರ ಬಗ್ಗೆ ಪುಸ್ತಕ  ಬರೀತಿಯ ? ೧೩. ನಿನಗೆ  ಯಾವ ಥರದ  ತಿಂಡಿ ಇಷ್ಟ  ? ನೀನು ನಿನ್ನದೇ  ಹೋಟೆಲ್ ಒಂದು ತೆಗೆದಿದ್ದರೆ , ಏನೇನೊ  ತಿಂಡಿ ಮಾಡ್ತಿಯಾ  ನಿನ್ನ ಹೋಟೆಲ್ ನಲ್ಲಿ . ? ೧೪. ನಿನ್ಹತ್ರ  ಒಂದು ಇಡೀ ದಿವಸ  ತುಂಬಾ ಚೆನ್ನಾಗಿರೋ  ಕ್ಯಾಮೆರಾ ಇದ್ರೆ , ಯಾವ / ಯಾರ  ಫೋಟೋ ತೆಗೆಯುತ್ತಿ ೧೫. ನೀನು  ವಿಜ್ಞಾನಿ  ಆಗಿ ಏನಾದ್ರೂ  ಕಂಡು ಹಿಡಿಯಬೇಕು  ಅಂತ ಯೋಚಿಸಿದ್ಯಾ ? ಹಾಗಿದ್ದರೆ , ಏನು  ಕಂಡು ಹಿಡಿಯೋದಕ್ಕೆ ಇಷ್ಟ  ?  ೧೬. ನಿನಗೆ  ಶಾಲೆ ಗೆ  ಹೋಗಬೇಕಾದ್ದೇ  ಇಲ್ಲ ಅಂತ ಅಂದು  ಕೊಳ್ಳೋಣ . ಆಗ ನೀನು  ಏನು ಮಾಡುತ್ತೀ ? ೧೭. ನೀನು , ಶಿಕ್ಷಕ , ಅಥವಾ  ಟೀಚರ್ ಆಗಿದ್ದೆ ಅಂದುಕೊಳ್ಳೋಣ . ಆಗ  ಮಕ್ಕಳಿಗೆ , ಏನು ಕಲಿಸಲಿಕ್ಕೆ ಇಷ್ಟ ನಿನಗೆ  ? ೧೮. ನಿನಗೆ  ಯಾವ ಕಥೆ  ಪುಸ್ತಕ ಇಷ್ಟ  ? ಯಾವ ಪಾತ್ರ ಇಷ್ಟ ? ೧೯. ನಿನ್ನ ಬಗ್ಗೆ ಯಾರಿಗೂ ಗೊತ್ತಿಲ್ದೆ ಇರೋ ವಿಷ್ಯ ಏನಾದ್ರೂ ನನಗೆ ಹೇಳ್ತಿಯ ?
Ep70+-+%E0%B2%8E%E0%B2%AE%E0%B3%8D%E0%B2%AE%E0%B3%86%E0%B2%AF%E0%B3%8B++%E0%B2%AE%E0%B3%87%E0%B2%95%E0%B3%86%E0%B2%AF%E0%B3%8B++%3F
access_time1 year ago
ಈ ಕತೆ ಇಂಡೋನೇಷ್ಯಾ ದೇಶದ ಜಾನಪದ ಕತೆಗಳಿಂದ ಆಯ್ದುಕೊಂಡಿದ್ದು .  ಕಳೆದ ಸಲದ “ಸೋಮಾರಿ ಸಿದ್ದ “ ನ ಹಾಗೆ , ಇನ್ನೂಬ್ಬ ಮುಗ್ದ ಮನುಷ್ಯನೊಬ್ಬನ  ಕತೆ . ಮನೆಯಲ್ಲಿ ಕಷ್ಟ ಅಂತ ಇದ್ದೊಂದು ಎಮ್ಮೆಯನ್ನ ಮಾರಿ ಬನ್ನಿ ಅಂತ ಅವನ  ಹೆಂಡತಿ ಕಳಿಸಿದರೆ , ಎಷ್ಟೆಲ್ಲಾ ಅವಾಂತರ ಮಾಡಿಕೊಂಡು ಬಂದ , ಮತ್ತು ಕೊನೆಯಲ್ಲಿ ಆಗಿದ್ದ  ಮೋಸದಿಂದ ಹೇಗೆ ತಪ್ಪಿಸಿಕೊಂಡ ಅನ್ನೋ ಮೋಜಿನ ಕತೆ ಕೇಳೋಣ .  
Ep69+-+%E0%B2%B8%E0%B3%8B%E0%B2%AE%E0%B2%BE%E0%B2%B0%E0%B2%BF+%E0%B2%B8%E0%B2%BF%E0%B2%A6%E0%B3%8D%E0%B2%A6
access_time1 year ago
ದಿನವಿಡೀ ನಿದ್ದೆ ಮಾಡುತ್ತಾ ಕಾಲ  ಕಳೆಯುತ್ತಿದ್ದ ಸಿದ್ದ ರಾತ್ರೋ ರಾತ್ರಿ ಪ್ರಖ್ಯಾತ ಮಂತ್ರವಾದಿ ಅನ್ನಿಸಿಕೊಂಡು ಬಿಟ್ಟ .  ! ತಿಳಿ ಹಾಸ್ಯದಿಂದ ಕೂಡಿದ ಈ ಕತೆ ನಿಮ್ಮನ್ನು ಹಾಗೂ ಮಕ್ಕಳನ್ನು ನಕ್ಕು ನಗಿಸುವುದು ಖಂಡಿತ .  ಹಾಗೆ , ಕಥೆಯ ಕೊನೆಯಲ್ಲಿ  ಕೇಳಿದ "ಜ್ಞಾನ - ವಿಜ್ಞಾನ - ವಿಸ್ಮಯ " ಅಂಕಣದಲ್ಲಿ ಕೇಳಿದ ಪ್ರಶ್ನೆಗಳಿಗೆ ಉತ್ತರ ಕಂಡುಹಿಡಿದು ಕಳಿಸೋದನ್ನ  ಮರೆಯಬೇಡಿ !
Ep68+-+%E0%B2%AE%E0%B3%8A%E0%B2%B8%E0%B2%B3%E0%B3%86+%E0%B2%AE%E0%B2%A4%E0%B3%8D%E0%B2%A4%E0%B3%81++%E0%B2%AE%E0%B2%82%E0%B2%97%E0%B3%8D%E0%B2%AF%E0%B2%BE%E0%B2%A8+%E0%B2%95%E0%B2%A4%E0%B2%BF
access_time1 year ago
ಕನ್ನಡದಾಗ ಭಾಳ  ಉಪ  ಭಾಷಾ  ಇದ್ರೂ  ನಮ್ಮ  ಉತ್ತರ  ಕರ್ನಾಟಕ  ಭಾಷಾದಾಗ ಕಥೆ  ಕೇಳೋ  ಮಜಾನ ಬ್ಯಾರೆ  .  ಅದಕ್ಕಾ ಈ ಸಲದ  ಕತಿ  ಉತ್ತರ ಕರ್ನಾಟಕ ಭಾಷಾದಾಗ  ಹೇಳಿ  ಬಿಟ್ಟೇವಿ . ಕತಿ  ಕೇಳ್ರಿ ,  ಮತ್ತ ನಿಮ್ಮ  ಗೆಳೆಯಂದ್ರಿರಿಗೂ  ಹೇಳ್ರಿ .  ಹಂಗ  ನಿಮಗ ಇನ್ನಷ್ಟು ಉತ್ತರ  ಕರ್ನಾಟಕದ ಕತಿಗಳು  ಕೇಳ್ಬೇಕು  ಅನಸಿದ್ರ , ಯಾವ್ ಕತಿ ಬೇಕು  ಅಂತ  ಬರೆದು ಕಳಿಸ್ರಿ .  ಇದು ನಮ್ಮ  ಹೊಸ ಪ್ರಯತ್ನ ,ನಿಮ್ಮ ಅನಿಸಿಕೆಗಳಿಂದ ನಮಗೆ  ಈ ತರಹದ ಹೊಸ ಪ್ರಯತ್ನ ಗಳನ್ನ ಮಾಡಲು ಸ್ಪೂರ್ತಿ ಸಿಗುತ್ತದೆ .  
Ep67+-+%E0%B2%B0%E0%B3%87%E0%B2%B7%E0%B3%8D%E0%B2%AE%E0%B3%86+%E0%B2%B5%E0%B3%8D%E0%B2%AF%E0%B2%BE%E0%B2%AA%E0%B2%BE%E0%B2%B0%E0%B2%BF%E0%B2%AF+%E0%B2%9A%E0%B2%BF%E0%B2%82%E0%B2%A4%E0%B3%86
access_time1 year ago
ನಾವು  ರಜೆಗೆ ಬೇರೆ ಊರಿಗೆ  ಹೋಗ  ಬೇಕಾದಾಗ ಕಾಡೋ ಚಿಂತೆ "ಮನೆ  ಅಷ್ಟು  ದಿವಸ  ಬೀಗ  ಹಾಕಿ  ಹೋಗೋದು ಹೇಗಪ್ಪಾ  ? " ಅನ್ನೋದು .  ಈ ಕತೆಯಲ್ಲೂ ಕೂಡ ವ್ಯಾಪಾರಕ್ಕಾಗಿ ಬೇರೆ  ಊರಿಗೆ  ಹೊರಟಿದ್ದ  ವಿಷ್ಣುವಿಗೂ ಅದೇ  ಚಿಂತೆ . ! . ಈ ಸಮಸ್ಯೆಗೆ ವಿಷ್ಣು  ಏನು ಪರಿಹಾರ ಹುಡುಕ್ತಾನೆ ಕೇಳೋಣ ?   ಜ್ಞಾನ - ವಿಜ್ಞಾನ - ವಿನೋದ :   ಮಕ್ಕಳೇ, ಈ ಕತೆಯಲ್ಲಿ ಬಂದಿರೋ ನೇರಳೆ ಮರಕ್ಕೆ ಭಾರತೀಯ ಸಂಸ್ಕೃತಿಯಲ್ಲಿ ದೊಡ್ಡ ಸ್ಥಾನ ಇದೆ. ಇಂಗ್ಲಿಷ್ನಲ್ಲಿ  Black plum ಅಥವಾ Jamun ಅಂತ ಕೂಡ ಕರೀತಾರೆ.ನೇರಳೆ ಹಣ್ಣು ಸಕ್ಕರೆ ಖಾಯಿಲೆ, ಅಥವಾ Diabetes ನಿಯಂತ್ರಣ ಮಾಡೋಕೆ ಹೇಳಿ ಮಾಡಿಸಿದ್ದು ಅಂತ ವಿಜ್ಞಾನಿಗಳು ಹೇಳ್ತಾರೆ.   ನೇರಳೆ ಹಣ್ಣು ತಿನ್ನೋದರಿಂದ ಮತ್ಯಾವ ಖಾಯಿಲೆಗಳು ಕಡಿಮೆ ಆಗುತ್ಯವೆ ಅಂತ ತಿಳಿದು ನಮಗೆ ಬರೆದು ತಿಳಿಸಿ.  ಹಾಗೆ, ಈ ಸಲದ ಕತೆಯಲ್ಲಿ ಎರಡು ಅತಿ ಹಳೆಯ , ಹಾಗೂವ್ ಪ್ರಸಿದ್ಧ ಊರುಗಳ ಪರಿಚಯ ಮಾಡಿಕೊಂಡ್ವಿ - ಪರ್ಷಿಯಾ ಹಾಗೂ ಬನಾರಸ್. ಈ ಊರುಗಳು ಈಗಲೂ ಇವೆ. ಇವುಗಳ ಈಗಿನ ಹೆಸರು ಏನು, ಹಾಗೂ ಈ ಪ್ರದೇಶಗಳು ಏಕೆ ಪ್ರಸಿದ್ಧ ಆಗಿದ್ವು ಅನ್ನೋದನ್ನ ತಿಳಿದು, ನಮಗೆ ಆಡಿಯೋ , ಪತ್ರದ ಮೂಲಕ ತಿಳಿಸ್ತೀರಾ ?  ನಿಮ್ಮ ಕಲಿಕೆಗೆ  ಈ ಕೆಳಗಿನ  ಮಿಂದಾಣ ( Website) ಗಳು ಸಹಾಯವಾಗಬಹುದು .  https://www.webmd.com/vitamins/ai/ingredientmono-530/jambolan https://www.acupuncturetoday.com/herbcentral/black_plum.php https://en.wikipedia.org/wiki/Persian_Empire https://en.wikipedia.org/wiki/Varanasi  
Ep66+-+%E0%B2%A8%E0%B2%95%E0%B3%8D%E0%B2%B8%E0%B2%A4%E0%B3%8D%E0%B2%B0%E0%B2%97%E0%B2%B3%E0%B3%81+%E0%B2%B9%E0%B3%81%E0%B2%9F%E0%B3%8D%E0%B2%9F%E0%B2%BF%E0%B2%A6++%E0%B2%95%E0%B2%A4%E0%B3%86+%28+%E0%B2%87%E0%B2%82%E0%B2%95%E0%B2%BE++%E0%B2%9C%E0%B2%BE%E0%B2%A8%E0%B2%AA%E0%B2%A6++%E0%B2%95%E0%B2%A4%E0%B3%86++%29
access_time1 year ago
ನಕ್ಷತ್ರಗಳು  ಬಹಳ  ಹಿಂದಿನಿಂದಲೂ ಮನುಷ್ಯರನ್ನು ಮೋಡಿ ಮಾಡಿವೆ .  ಹೀಗಾಗಿ , ಜನಪದ ದಲ್ಲಿ  ಅವುಗಳ  ಹುಟ್ಟನ್ನು  ವಿವರಿಸೋ  ಅನೇಕ  ಕತೆಗಳು  ಹುಟ್ಟಿಕೊಂಡಿವೆ .  ದಕ್ಷಿಣ  ಅಮೆರಿಕಾದ  ಇಂಕಾ  ಜನಾಗದಲ್ಲಿ  ಕೂಡ  ಈ ಬಗ್ಗೆ  ಒಂದು  ಆಕರ್ಷಕ  ವಿವರಣೆ  ಈ ಸಲದ  ಕತೆಯಲ್ಲಿ .  ಈ ಕತೆಯ ಮೂಲ :   https://www.folklore.ee/folklore/vol12/inca.htm  https://incadiscover.weebly.com/folk-tales.html ಜ್ಞಾನ - ವಿಜ್ಞಾನ - ವಿನೋದ  ಅಂಕಣದ  ಪ್ರಶ್ನೆಗಳು :  ೧. ಭೂಮಿಯ  ಕತೆ  Milkyway ಪುಂಜದಲ್ಲಿ  ಯಾವ್ಯಾವ ಗ್ರಹಗಳಿವೆ  ?  ೨. ಆಕಾಶದಲ್ಲಿರುವ  ಗ್ರಹಗಳು  ಗಾಳಿಯಲ್ಲಿ  ತೇಲುತ್ತಿರೋ  ರೀತಿ  ಕಾಣಿಸುತ್ತವೆ . ಆದರೂ , ಅವು   ಕೆಳಗೆ ಬೀಳೋದಿಲ್ಲ  ಯಾಕೆ  ?  ನಿಮ್ಮ  ಉತ್ತರ , ಮರು  ಪ್ರಶ್ನೆಗಳನ್ನು  ಆಡಿಯೋ ರಿಕಾರ್ಡಿಂಗ್  ಮೂಲಕ  kelirondu@gmail.com ವಿಳಾಸಕ್ಕೆ  ಇಮೇಲ್  ಕಳಿಸಿ .       
Comments